ಸುಳ್ಯ: ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾರ್ವಜನಿಕ ಸಭೆಯಲ್ಲಿ “ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಬಡತನ ಅಂತ್ಯವಾಗುತ್ತದೆಯೇ? ಹೊಟ್ಟೆ ತುಂಬಿಸುತ್ತದೆಯೇ, ದೇಶಕ್ಕೇನ್ನು ಲಾಭವೆಂದು ಪ್ರಶ್ನಿಸಿದ್ದಾರೆ. ಈ ಹೇಳಿಕೆ ದೇಶದ ನೂರಾರು ಕೋಟಿ ಹಿಂದೂಗಳ ಭಾವನೆಗೆ ಘಾಸಿ ಮಾಡುವಂತ ಹೇಳಿಕೆಯಾಗಿದೆ ಯೆಂದು ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಲಳಂಬೆ ತಿಳಿಸಿದ್ದಾರೆ.ಮಹಾ ಕುಂಭ ಮೇಳ ಸನಾತನ ಧರ್ಮದ ಪ್ರತೀಕವಾಗಿದೆ.ಸುಳ್ಯದಂತ ಗ್ರಾಮೀಣ ಪ್ರದೇಶದಿಂದ ಕೂಡ ಈ ಕುಂಭಮೇಳಕ್ಕೆ ಹೋಗಿ ನೂರಾರು ಜನ ಗಂಗಾ ಸ್ನಾನ ಮಾಡಿ ಬಂದು ಪುನೀತರಾಗಿದ್ದಾರೆ. ಅದೊಂದು ಶ್ರದ್ಧೆಯ ಕೇಂದ್ರವಾಗಿದೆ. ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಮುಖರಿಗೆ ನಮ್ಮದೊಂದು ಪ್ರಶ್ನೆಯಿದೆ ಆಯಾಯ ಧರ್ಮದವರು ಮೆಕ್ಕಾ, ವ್ಯಾಟಿಕನ್ ಗೆ ತೆರಳಿ ದೇವರ ದರ್ಶನ ಮಾಡಿ ಬರುತ್ತಾರೆ ಹಾಗಾದರೆ ಬಡವರ ಹೊಟ್ಟೆ ತುಂಬುತ್ತದೆಯೆಂದು ಕೇಳುವ ಧೈರ್ಯ ನಿಮಗೆ ಇದೆಯೇ? ಪ್ರಧಾನಿ ಮೋದಿ,ಗೃಹ ಸಚಿವ ಅಮಿತ್ ಶಾ ಬಗ್ಗೆ ಎಷ್ಟು ಮುಳುಗಿದರೂ ಸ್ವರ್ಗಕ್ಕೆ ಹೋಗಲ್ಲ ವೆನ್ನುವ ಬಾಲಿಶ ಹೇಳಿಕೆಯನ್ನು ಖಂಡಿಸುತ್ತೇವೆ. ತಕ್ಷಣ ಮಲ್ಲಿಕಾರ್ಜುನ ಖರ್ಗೆಯವರು ಇಂತಹ ಬೇಜವಾಬ್ದಾರಿ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಲಳಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ
- Thursday
- January 30th, 2025