
ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ 76ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆಯನ್ನು ವಿವೇಕಾನಂದ ವೃತ್ತದ ಬಳಿ ಇರುವ ಬಿಸಿಎಂ ವಿದ್ಯಾರ್ಥಿನಿ ನಿಲಯದಲ್ಲಿ ಆಚರಿಸಲಾಯಿತು. ಜೇಸಿ ವಲಯ 15ರ ವಲಯಾಧಿಕಾರಿ ವಲಯ ಸಂಯೋಜಕರಾದ ಜೇಸಿ ಜೆಎಫ್ಎಂ ಗುರುಪ್ರಸಾದ್ ನಾಯಕ್ ಧ್ವಜಾರೋಹಣ ಗೈದು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಜೇಸಿಐ ಪಯಸ್ವಿನಿಯ ಅಧ್ಯಕ್ಷರಾದ ಜೇಸಿ ಸುರೇಶ್ ಕಾಮತ್, ನಿಕಟಪೂರ್ವ ಅಧ್ಯಕ್ಷರಾದ ಜೇಸಿ ಹೆಚ್.ಜಿ.ಎಫ್ ನವೀನ್ ಕುಮಾರ್, ಪೂರ್ವಾಧ್ಯಕ್ಷರುಗಳಾದ ಜೆ ಸಿ ಹೆಚ್ ಜಿ.ಎಫ್ ದೇವರಾಜ್ ಕುದ್ಪಾಜೆ, ರಂಜಿತ್ ಕುಕ್ಕೆಟ್ಟಿ, ಕಾರ್ಯದರ್ಶಿಯಾದ ಶ್ರೀಮತಿ ಲತಾಶ್ರೀ ಸುಪ್ರೀತ್ ಮೊಂಟಡ್ಕ,ವಿದ್ಯಾರ್ಥಿ ನಿಲಯದ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
