ಗುತ್ತಿಗಾರು ಗ್ರಾಮದ ಪೈಕ ಶ್ರೀ ಶಂಖಚೂಡ ಕ್ಷೇತ್ರ ಪುರಾಳಬದಿ ಮಣಿಯಾನ ದಲ್ಲಿ (ಕಂಚು ಕಲ್ಲಿಗೆ ತೆಂಗಿನಕಾಯಿ ಒಡೆಯುವ ಸ್ಥಳ) ಜ. 19ರಂದು ಬೆಳಿಗ್ಗೆ 9-10ರಿಂದ 9-56ರರೊಳಗಿನ ಕುಂಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಶಂಖಚೂಡ ದೇವರು ಮತ್ತು ಪರಿವಾರ ಸಾನಿಧ್ಯಗಳಿಗೆ ನೂತನವಾಗಿ ನಿರ್ಮಿಸಿರುವ ಕಟ್ಟೆಗಳಲ್ಲಿ ನವೀಕರಣ ಪುನರ್ ಪ್ರತಿಷ್ಠಾ ಕಲಶೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳು ಆಶ್ವತ್ ಇವರ ನೇತೃತ್ವದಲ್ಲಿ ನಡೆಯಲಿದೆ.
ಜ. 18 ಶನಿವಾರದಂದು ಸಂಜೆ ತಂತ್ರಿಗಳನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಣಿಯಾನ ಸುಬ್ಬಣ್ಣ ಗೌಡ, ಕ್ಷೇತ್ರದ ಅನುವಂಶೀಯ ಅಧ್ಯಕ್ಷರಾದ ಮಣಿಯಾನ ಪುರುಷೋತ್ತಮ ಹಾಗೂ ಸಮಿತಿ ಪದಾಧಿಕಾರಿಗಳು ಪೂರ್ಣಕುಂಭದೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ರಾತ್ರಿ ಸಾಮೂಹಿಕ ಪ್ರಾರ್ಥನೆ, ಆಚಾರ್ಯ ವರಣ, ಪ್ರಾಸಾದ ಬಿಂಬ ಪರಿಗ್ರಹ, ಪಶುಧಾನ ಪುಣ್ಯಾಹ, ಪ್ರಾಸಾದ ಶುದ್ದಿ, ಜಲಾಧಿವಾಸ, ಸ್ಥಳ ಶುದ್ಧಿ, ರಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಬಳಿಕ ಅನ್ನಸಂತರ್ಪಣೆ ನಡೆಯಿತು.
ಜ.19 ಆದಿತ್ಯವಾರದಂದು ಬೆಳಿಗ್ಗೆ ಶ್ರೀ ಗಣಪತಿ ಹೋಮ, ಜಲೋದ್ಧಾರ, ಬಿಂಬ ಶುದ್ದಿ, ಅನುಜ್ಞಾಕಲಶ, ಅನುಜ್ಞಾ ಪೂಜೆ, ಪ್ರಾರ್ಥನೆ, ಜೀವೋದ್ವಾಸನೆ, ಕಲಶ ಪೂಜೆ, ಪ್ರಾಸಾದ ಪ್ರತಿಷ್ಠೆ, ಪೀಠ ಪ್ರತಿಷ್ಠೆ, ಪಾಯಸ ಹೋಮ, ಶಂಖಚೂಡ ಪ್ರತಿಷ್ಠೆ, ಜೀವ ಕಲಶಾಭಿಷೇಕ, ಕ್ಷೀರಾಭಿಷೇಕ, ಬೊಂಡಾಭಿಷೇಕ, ಕಲಶಾಭಿಷೇಕ, ಆಶ್ಲೇಷ ಬಲಿ, ನೈವೇದ್ಯ ಸಮರ್ಪಣೆ, ಮಹಾಪೂಜೆ, ನಿತ್ಯ ನೈಮಿತ್ಯಾಧಿಗಳ ನಿರ್ಣಯ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.