ಎಲಿಮಲೆ – ಅಂಬೆಕಲ್ಲು ತರವಾಡು ಮನೆ ರಸ್ತೆಯ ಐದು ಪಟ್ಟೆ ಎಂಬಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ನ ವಿಶೇಷ ಅನುದಾನದಿಂದ ನೂತನವಾಗಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯ ಉದ್ಘಾಟನಾ ಕಾರ್ಯಕ್ರಮ ಜ.16 ರಂದು ನಡೆಯಿತು. ಹಿರಿಯ ಫಲಾನುಭವಿಗಳಾದ ಶ್ರೀ ವಿಷ್ಣು ಗೌಡ ಅಂಬೆಕಲ್ಲು ಹಾಗೂ ಬಾಲಕೃಷ್ಣ ಗೌಡ ಅಂಬೆಕಲ್ಲು ರವರು ದೀಪ ಪ್ರಜ್ವಲಿಸಿ, ಜಯಪ್ರಕಾಶ್ ಅಂಬೆಕಲ್ಲು (ಮೊಗ್ರ ) ರಿಬ್ಬನ್ ಎಳೆಯುವ ಮೂಲಕ ಮತ್ತು ಆನಂದ ಅಂಬೆಕಲ್ಲು (ನಾರ್ಣಕಜೆ ) ತೆಂಗಿನಕಾಯಿ ಒಡೆಯುವುದರ ಮೂಲಕ ರಸ್ತೆಯು ಲೋಕಾರ್ಪಣೆಗೊಂಡಿತು. ಈ ಸಂದರ್ಭದಲ್ಲಿ ರಸ್ತೆ ನಿರ್ಮಾಣದ ಪ್ರಮುಖ ಕಾರಣಕರ್ತರಾದ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಕಿಶೋರ್ ಅಂಬೆಕಲ್ಲು, ಅರುಣ್ ಅಂಬೆಕಲ್ಲು, ರಾಜೇಶ್ ಅಂಬೆಕಲ್ಲು, ಆನಂದ ಶೀರಡ್ಕ ಅಂಬೆಕಲ್ಲು, ರಸ್ತೆಯ ಫಲಾನುಭವಿಗಳೂ ಹಾಗೆಯೇ ರಸ್ತೆ ಆಗಲೀಕರಣಕ್ಕೆ ಧನಸಹಾಯ ನೀಡಿ ಸಹಕರಿಸಿದ ಜಯಪಾಲ್ ಅಂಬೆಕಲ್ಲು, ಜಗದೀಶ್ ಅಂಬೆಕಲ್ಲು, ಸಂದೇಶ್ ಅಂಬೆಕಲ್ಲು, ಹರಿ ಮಣಿಯೂರು, ಶ್ರೀಮತಿ ಪ್ರಕಾಶ್ ಮುಂತಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
- Wednesday
- January 22nd, 2025