
ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಯೇನೆಕಲ್ಲು ಇದರ ಆಡಳಿತ ಮಂಡಳಿಗೆ ಜ.27 ರಂದು ಚುನಾವಣೆ ನಡೆಯಲಿದೆ. ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು ಜ.16 ರಂದು ನಾಮಪತ್ರ ಸಲ್ಲಿಸಿದರು.
ಸಾಮಾನ್ಯ ಕ್ಷೇತ್ರಕ್ಕೆ ಭವಾನಿಶಂಕರ ಪೂಂಬಾಡಿ, ಭರತ್ ನೆಕ್ರಾಜೆ, ದುರ್ಗಪ್ರಸಾದ್ ಪರಮಲೆ, ಶಿವಪ್ರಸಾದ್ ಮಾದನಮನೆ, ಗೋಪಾಲ ಗೌಡ ಮಾಣಿಬೈಲು, ರಮೇಶ್ ಹೊಸೊಳಿಕೆ, ಮಹಿಳಾ ಕ್ಷೇತ್ರಕ್ಕೆ ಶ್ರೀಮತಿ ವಿಶಾಲಾಕ್ಷಿ ಕುಕ್ಕಪ್ಪನಮನೆ ಹಾಗೂ ಶ್ರೀಮತಿ ಶಶಿಕಲಾ ಅಮೈ, ಹಿಂದುಳಿದ ವರ್ಗ ‘ಬಿ’ ಕ್ಷೇತ್ರಕ್ಕೆ ಪ್ರಶಾಂತ್ ದೋಣಿ ಮನೆ, ಹಿಂದುಳಿದ ವರ್ಗ ‘ಎ’ ಕ್ಷೇತ್ರಕ್ಕೆ ತಿಮ್ಮಪ್ಪ ಪೂಜಾರಿ ಉಜಿರ್ ಕೋಡಿ, ಪರಿಶಿಷ್ಟ ಪಂಗಡ ಕ್ಷೇತ್ರಕ್ಕೆ ರಮೇಶ್ ನಾಯ್ಕ ಬೂದಿಪಳ್ಳ, ಪರಿಶಿಷ್ಟ ಜಾತಿ ಕ್ಷೇತ್ರಕ್ಕೆ ಗಿರೀಶ್ ಪದ್ನಡ್ಕ ನಾಮಪತ್ರ ಸಲ್ಲಿಸಿದ್ದಾರೆ.
