ಜಾಲ್ಸೂರು ಗ್ರಾಮದ ಕುಂಬರ್ಚೊಡು ಬಳಿ ಪಿಕಪ್ ಪಲ್ಟಿಯಾಗಿ ಚಾಲಕನಿಗೆ ಸಣ್ಣಪುಟ್ಟ ಗಾಯಗೊಂಡ ಘಟನೆ ಜ.15 ರಂದು ನಡೆದಿದೆ. ಕಾಟೂರು ಭಾಗಕ್ಕೆ ಜಲ್ಲಿ ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿಯಾದ ಘಟನೆಯಲ್ಲಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಾಲಕ ಅಪಾಯದಿಂದ ಪಾರಾದ ಘಟನೆ ನಡೆದಿದೆ.
ಈ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ಹಂಪ್ಸ್ ನಿಂದಾಗಿ ಈ ಘಟನೆ ಸಂಭವಿಸಿರುವುದಾಗಿ ಹೇಳಲಾಗಿದೆ. ಈ ಹಿಂದೆ ಇಲ್ಲಿ ರಿಕ್ಷಾ ಹಾಗು ಲಾರಿ ಕೂಡ ಪಲ್ಟಿಯಾದ ಘಟನೆ ಸಂಭವಿಸಿತ್ತು. ಕೊಡಲೇ ಈ ಹಂಪ್ಸನ್ನು ತೆರಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
- Wednesday
- January 22nd, 2025