
ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆ ವತಿಯಿಂದ ಕಲೆ,ಸಾಹಿತ್ಯ ಭಾಷೆ, ನೆಲ- ಜಲ ,ಸಂಸ್ಕೃತಿ ಮೊದಲಾದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಯನ್ನು ಗೈದ ಗಣ್ಯರಿಗೆ ರಾಷ್ಟ್ರೀಯ ಯುವ ದಿನಾಚರಣೆಯಂದು ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪೆನ್ಸಿಲ್ ಆರ್ಟ್, ವಾಲ್ ಆರ್ಟ್ ಆರ್ಕಿಲಿಕ್ ಆರ್ಟ್ ಮುಖವಾಡ ತಯಾರಿ ಕ್ಯಾನ್ವಾಸ್ ಆರ್ಟ್ ಹಾಗೂ ಇತರ ಚಿತ್ರಕಲೆ ಮೂಲಕ ಪ್ರಸಿದ್ಧಿ ಪಡೆದ ಕು.ಪೂಜಾ ಬೋರ್ಕರ್ ಅವರನ್ನು ರಾಷ್ಟ್ರಮಟ್ಟದ ಕಲಾವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರಿಗೆ ಪ್ರಶಸ್ತಿ ಯನ್ನು ಜನವರಿ 26ರಂದು ಬೆಳಗಾವಿ ರಾಷ್ಟ್ರೀಯ ಯುವ ದಿನಾಚರಣೆ ಯಂದು ಪ್ರಧಾನ ಮಾಡಲಾಗುವುದು ಎಂದು ಬೆಳಗಾವಿ ಕಸ್ತೂರಿ ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಎಲ್. ಎಚ್. ಪೆಂಡಾರಿ ತಿಳಿಸಿದ್ದಾರೆ.
