ಅರಂತೋಡು ಪಟೇಲ್ ಚಾರಿಟೇಬಲ್ ಟ್ರಸ್ಟ್ ಮತ್ತು ಸುಳ್ಯ ಏನ್ ಲೈಟ್ ಎಜ್ಯುಕೇಶನ್ ಸರ್ವಿಸ್ ವತಿಯಿಂದ ಎಸ್ ಎಸೆಲ್ಸಿ ವಿದ್ಯಾರ್ಥಿ ಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯದ ಬಗ್ಗೆ ತರಬೇತಿ ಮತ್ತು ಪರಿಕ್ಷಾ ಪೂರ್ವ ಸಿದ್ಧತಾ ಮಾಹಿತಿ ಕಾರ್ಯಗಾರ ವು ಅರಂತೋಡು ಪಟೇಲ್ ಕಾಂಪ್ಲೆಕ್ಸ್ ನಲ್ಲಿ ಜ.14 ರಂದು ನಡೆಯತು.ಅಧ್ಯಕ್ಷತೆಯನ್ನು ಪಟೇಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಬದ್ರುದ್ದೀನ್ ಪಟೇಲ್ ವಹಿಸಿದರು. ಸೈಫುದ್ದೀನ್ ಪಟೇಲ್ ಹಾಗೂ.ನಿವೃತ ಎನ್.ಎಂ. ಪಿಯುಸಿ ಶಿಕ್ಷಕ ಅಬ್ದುಲ್ಲಾ ಮಾಸ್ತರ್,ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಪಟೇಲ್ ಚಾರಿಟೇಬಲ್ ಗೌರವಾಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಪಟೇಲ್,ಸುಳ್ಯ ತಾಲ್ಲೂಕು ಕೆಡಿಪಿ ಸದಸ್ಯ ಅಶ್ರಫ್ ಗುಂಡಿ, ಅರಂತೋಡು ಪ್ರಾಥಮಿಕ ಶಾಲಾ ಎಸ್ ಡಿ ಎಂ.ಸಿ ಉಪಾಧ್ಯಕ್ಷ ಅಮೀರ್ ಕುಕ್ಕಂಬಳ,ಸಾಮಾಜಿಕ ಕಾರ್ಯಕರ್ತ ತಾಜುದ್ದೀನ್ ಅರಂತೋಡು,ಸಂಶುದ್ದೀನ್ ಪೆಲ್ತಡ್ಕ, ಎನ್ ಲೈಟ್ ಸದಸ್ಯ ಕಮಾಲ್ ಅಜ್ಜಾವರ,ಆಶಿಕ್ ಸುಳ್ಯ,ಮಸೂದ್ ಸುಳ್ಯ, ಪಟೇಲ್ ಚಾರಿಟೇಬಲ್ ಟ್ರಸ್ಟ್ ಸದಸ್ಯ ಅನ್ವರ್ ಕೆ ಎಂ,ಉಪಸ್ಥಿತರಿದ್ದರು,ವಿದ್ಯಾರ್ಥಿಗಳಿಗೆ ಶಿಕ್ಷಕ ಇಬ್ರಾಹಿಮ್ ಮಾಸ್ತರ್ ಮಾಡವು ಮತ್ತು ಶಿಕ್ಷಕಿ ಶಾಹನಾಜ್ ಕಾರ್ಯಗಾರ ನಡೆಸಿದರು . ಎನ್ ಲೈಟ್ ಶಿಕ್ಷಕ ರಹೂಫ್ ಆರ್ ಬಿಎ ಸುಳ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
- Wednesday
- January 22nd, 2025