ಕಳಂಜ ವಿಷ್ಣುನಗರದ ಬಳಿ ಚಂದ್ರ ಗೌಡ ಕಜೆಮೂಲೆಯವರು ಚಲಾಯಿಸಿಕೊಂಡು ಹೋಗುತ್ತಿದ್ದ ಜೀಪಿಗೆ ಅಯ್ಯನಕಟ್ಟೆಯಿಂದ ಚೊಕ್ಕಾಡಿ ಕಡೆಗೆ ವೇಗದಲ್ಲಿ ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಮುಖಾಮುಖಿಯಾಗಿ ಡಿಕ್ಕಿಯಾದ ಘಟನೆ ಜ.13ರಂದು ವರದಿಯಾಗಿದೆ. ಬೈಕ್ ಸವಾರ ಪೆರಾಜೆಯವರಾಗಿದ್ದು ಅಪಘಾತದ ಪರಿಣಾಮ ಬೈಕ್ ಸಂಪೂರ್ಣ ನಜ್ಜು-ಗುಜ್ಜಾಗಿದ್ದು ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಚಂದ್ರ ಗೌಡ ಕಜೆಮೂಲೆಯವರು ಗಾಯಾಳುವನ್ನು ಸುಳ್ಯದ ಕೆ.ವಿ.ಜಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದುಬಂದಿದೆ.
- Wednesday
- January 22nd, 2025