
ಸಾರ್ವಜನಿಕ ದೇವತಾರಾಧನಾ ಸಮಿತಿ (ಕೊರತ್ತಿಕಲ್ಲು) ರಾಮನಗರ, ಕಲ್ಮಡ್ಕ ಇಲ್ಲಿ 6 ನೇ ವರ್ಷದ ಶ್ರೀ ಕೊರತ್ತಿ ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ ಜ.16 ರಂದು ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ರವೀಂದ್ರ ಗೌಡ ಮಾಳಿಗೆ ತಿಳಿಸಿದ್ದಾರೆ.
ಜ.16 ರಂದು ಬೆಳಿಗ್ಗೆ ಬ್ರಹ್ಮಶ್ರೀ ವೇದಮೂರ್ತಿ ಕರುವಜೆ ಕೇಶವ ಜೋಯಿಸರ ನೇತೃತ್ವದಲ್ಲಿ ಸ್ಥಳ ಶುದ್ಧಿ, ಗಣಪತಿ ಹವನ, ಶುದ್ಧಿಕಲಶ, ಕಲಶಾಭಿಷೇಕ, ದೈವಗಳಿಗೆ ತಂಬಿಲಗಳು, ಮಂಗಳಾರತಿ ನಡೆಯಲಿದೆ. ಸಂಜೆ 5-00ರಿಂದ ಭಜನೆ (ಸ್ಥಳೀಯರಿಂದ), ರಾತ್ರಿ 8-00ರಿಂದ ಭೋಜನ, ರಾತ್ರಿ 9-00ರಿಂದ ಶ್ರೀ ಕೊರತ್ತಿ, ಬೋಂಟೆ ಅಂಗಾರ, ಪಂಜುರ್ಲಿ, ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ.
