Ad Widget

ಲೇಖನ : “ಬದುಕು” ಅವಕಾಶಗಳ ಹೆಬ್ಬಾಗಿಲು…

“ಬದುಕು ಎಂದರೇನು..?” ಎನ್ನುವಂತಹ ಪ್ರಶ್ನೆ ಪ್ರತಿಯೊಬ್ಬರಿಗೂ ಕೂಡ ಒಮ್ಮೆಯಾದರೂ ಕಾಡಿಯೇ ಕಾಡಿರುತ್ತದೆ. ಆದರೆ ಹೆಚ್ಚಿನವರು ಈ ಪ್ರಶ್ನೆಗೆ ಉತ್ತರ ಹುಡುಕಲು ಹೋಗುವುದಿಲ್ಲ. ಒಂದು ವೇಳೆ ಉತ್ತರ ಹುಡುಕಿದರೂ ಕೂಡ ಈ ಪ್ರಶ್ನೆಯನ್ನು ತಮ್ಮ ವಾಸ್ತವ ಬದುಕಿಗೆ ಹೋಲಿಕೆ ಮಾಡಿಕೊಂಡು ಒಂದು ಉತ್ತರವನ್ನು ತಮಗೆ ತಾವೇ ಸೃಷ್ಟಿಸಿಕೊಳ್ಳುತ್ತಾರೆ. ಉದಾಹರಣೆಗೆ ಜೀವನದಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸಿದ ವ್ಯಕ್ತಿ “ಬದುಕು ಎಂದರೆ ಕಷ್ಟಗಳ ಕೋಟೆ” ಎನ್ನಬಹುದು. ಜೀವನದಲ್ಲಿ ತುಂಬಾ ನೋವುಗಳನ್ನು ಅನುಭವಿಸಿದ ವ್ಯಕ್ತಿ “ಬದುಕು ಎಂದರೆ ನೋವುಗಳ ಮೂಟೆ” ಎನ್ನಬಹುದು. ಅದೇ ರೀತಿ ಜೀವನದಲ್ಲಿ ಹೆಚ್ಚು ಖುಷಿ ಹಾಗೂ ಸಂತೋಷವನ್ನು ಅನುಭವಿಸಿದ ವ್ಯಕ್ತಿ “ಬದುಕು ಎಂದರೆ ಖುಷಿಗಳ ಖಜಾನೆ” ಎನ್ನಬಹುದು. ಆದರೆ ವಾಸ್ತವವಾಗಿ ಈ ಎಲ್ಲಾ ಉತ್ತರಗಳೂ ಕೂಡ ನಮ್ಮ ಮನಸ್ಸನ್ನು ನಾವು ಸಂತೈಸಿಕೊಳ್ಳಲು ಹಾಗೂ ನಮ್ಮನ್ನು ನಾವು ಸಮಾಧಾನಪಡಿಸಿಕೊಳ್ಳುವ ಸಲುವಾಗಿ ನಮ್ಮ ವಾಸ್ತವ ಬದುಕಿನೊಂದಿಗೆ ಅಥವಾ ವಾಸ್ತವ ಪರಿಸ್ಥಿತಿಯೊಂದಿಗೆ ಈ ಪ್ರಶ್ನೆಯನ್ನು ಹೋಲಿಕೆ ಮಾಡಿಕೊಂಡು ಕಂಡುಕೊಂಡಂತಹ ಸಮಾಧಾನಕರ ಉತ್ತರಗಳು ಮಾತ್ರ…
ಆದರೆ ನಿಜವಾಗಿಯೂ ಬದುಕು ಎಂದರೆ ಒಂದು ಅದ್ಭುತವಾದ “ಅವಕಾಶಗಳ ಹೆಬ್ಬಾಗಿಲು..” ಇಲ್ಲಿ ನಮಗೆ ಎದುರಾಗುವಂತಹ ಪ್ರತೀ ಕಷ್ಟಗಳಲ್ಲೂ ಒಂದು ಹೊಸ ದಾರಿ ಇರುತ್ತದೆ. ಇಲ್ಲಿ ನಾವು ಅನುಭವಿಸುವಂತಹ ಪ್ರತೀ ನೋವುಗಳಲ್ಲೂ ಒಂದು ಹೊಸ ತಿರುವು ಇರುತ್ತದೆ. ಆ ಹೊಸ ದಾರಿಗಳನ್ನು ಹಾಗೂ ತಿರುವುಗಳನ್ನು ಹುಡುಕಿ ಕಂಡುಕೊಳ್ಳುವಂಥಹ ತಾಳ್ಮೆ ಹಾಗೂ ಜಾಣ್ಮೆ ನಮ್ಮಲ್ಲಿರಬೇಕು…✍️ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading