ಸುಳ್ಯ ಭೂ ಅಭಿವೃದ್ಧಿ (LD Bank) ಬ್ಯಾಂಕ್ ಚುನಾವಣೆ ಜ. 12 ರಂದು ನಡೆಯಲಿದ್ದು ಸಾಲಗಾರರಲ್ಲದ ಕ್ಷೇತ್ರದಿಂದ ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಸುಳ್ಯ ಭೂ ಅಭಿವೃದ್ಧಿ ಬ್ಯಾಂಕ್ ನ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಯಾವುದೇ ಕಾರ್ಯಕರ್ತರ ಅಭಿಪ್ರಾಯ ಪಡೆಯದೇ ತೀರ್ಮಾನ ಕೈಗೊಂಡಿರುವ ಹಿನ್ನೆಲೆಯಲ್ಲಿ ಶೈಲೇಶ್ ಅಂಬೆಕಲ್ಲು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿರುವ ಇವರು ಕೊರೊನಾ ಅವಧಿಯಲ್ಲಿ ವಾರಿಯರ್ ಆಗಿ ಗ್ರಾಮದಲ್ಲಿ ತೊಂದರೆಗೆ ಸಿಲುಕಿದವರ ಮನೆಗಳಿಗೆ ನೆರವಾಗುವ ಮೂಲಕ ಜನರ ಮೆಚ್ಚುಗೆ ಪಾತ್ರರಾಗಿದ್ದರು. ನೂರಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡುವ ಸಮಾಜ ಸೇವಕರೆನಿಸಿದ್ದಾರೆ. ಇವರು ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ಇವರು ಇದೀಗ ಎಲ್.ಡಿ.ಬ್ಯಾಂಕ್ ನ ನಿರ್ದೇಶಕರ ಸ್ಥಾನಕ್ಕೆ ನಡೆಯುವ ಚುನಾನಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.ಇವರೊಂದಿಗೆ ಸಾಲಗಾರ ಕ್ಷೇತ್ರದ ಸುಳ್ಯ ವಲಯದಿಂದ ಜ್ಞಾನೇಶ್ವರ ಶೇಟ್, ನೆಲ್ಲೂರು ಕೆಮ್ರಾಜೆ ವಲಯದಿಂದ ದೇವಿಪ್ರಸಾದ್ ಸುಳ್ಳಿ, ಜಾಲ್ಸುರು ವಲಯದಿಂದ ಸುರೇಶ್ ಸ್ಪರ್ದಿಸುತ್ತಿದ್ದಾರೆ. ಇವರೊಂದಿಗೆ ಸ್ಪರ್ಧೆಗೆ ಇಳಿದಿದ್ದ ಪಂಬೆತ್ತಾಡಿ ವಲಯದ ಸುಬ್ರಮಣ್ಯ ಭಟ್ ಹಾಗೂ ಕಳಂಜ ವಲಯದ ಈಶ್ವರಚಂದ್ರ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.