ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಡಳಿತ ಮಂಡಳಿಯ ಅದ್ಯಕ್ಷರಾಗಿ ಸತತ ಮೂರನೇ ಬಾರಿಗೆ . ಅನಂತ್ ಊರುಬೈಲು ರವರು ಮತ್ತು ಉಪಾಧ್ಯಕ್ಷರಾಗಿ ಯಶವಂತ ದೇವರಗುಂಡ ರವರು ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ತೀರ್ಥಪ್ರಸಾದ್ ಕೋಲ್ಚಾರು, ದಯಾನಂದ ಪನೇಡ್ಕ, ರಾಮಮೂರ್ತಿ ಉಂಬಳೆ, ಹೊನ್ನಪ್ಪ ಕಾಸ್ಪಾಡಿ, ದಿನೇಶ್ ಸಣ್ಣಮನೆ, ಕಿಶನ್ ಪೊನ್ನಾಟಿಯಂಡ, ಪುಂಡರೀಕ ಅರಂಬೂರು,ಪ್ರಿಯಾಂಕ ರೋಹಿತ್ ಹೊಸೂರು,ವಾಣಿ ಜಗದೀಶ್ ಕೆದಂಬಾಡಿ, ವಸಂತ ನಾಯ್ಕ ಕುದ್ರೆಪಾಯ ಹಾಗೂ ಪಕೀರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಆನಂದ ಉಪಸ್ಥಿತರಿದ್ದರು. ಸಿದ್ದಲಿಂಗಮೂರ್ತಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅನಂತ್ ಊರುಬೈಲು ನೇತೃತ್ವದಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಎಲ್ಲಾ 13 ಅಭ್ಯರ್ಥಿಗಳು ಭಾರಿ ಅಂತರದಿಂದ ವಿಜಯ ಸಾಧಿಸಿದ್ದರು.