ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ಶ್ರೀ ಹರಿಹರೇಶ್ವರ ದೇವಸ್ಥಾನ, ಹರಿಹರ ಪಳ್ಳತ್ತಡ್ಕ ಇವರ ಸಹಯೋಗದಲ್ಲಿ ಜ.11 ರಿಂದ 20 ರವರೆಗೆ ಪ್ರತೀ ದಿನ ಬೆಳಿಗ್ಗೆ 6:00 ರಿಂದ 7:00 ಗಂಟೆಯ ತನಕ ಶ್ರೀ ಹರಿಹರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ “ಉಚಿತ ಯೋಗ ತರಬೇತಿ ಶಿಬಿರ” ನಡೆಯಲಿದ್ದು, ಜ.11 ರಂದು ಉಚಿತ ಯೋಗ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ ನಡೆಯಲಿದೆ. ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು ರವರು ಬೆಳಿಗ್ಗೆ 7:00 ಗಂಟೆಗೆ ಶಿಬಿರವನ್ನು ಉದ್ಘಾಟಿಸಲಿದ್ದು, ಶಿಬಿರದ ನಿರ್ದೇಶಕರಾದ ಲ| ರಾಮಚಂದ್ರ ಪಳಂಗಾಯ ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷರು, ಕಾರ್ಯದರ್ಶಿಗಳು, ಖಜಾಂಜಿಗಳು ಉಪಸ್ಥಿತರಿರಲಿದ್ದಾರೆ.
ಯೋಗ ಶಿಕ್ಷಕರು ಹಾಗೂ ರಾಜ್ಯ ಮಟ್ಟದ ಯೋಗಾಸನ ತೀರ್ಪುಗಾರರಾದ ಶರತ್ ಮರ್ಗಿಲಡ್ಕ ರವರು ಯೋಗ ತರಬೇತಿ ನೀಡಲಿದ್ದಾರೆ. ಯೋಗಾಸಕ್ತರು ಶಿಬಿರದಲ್ಲಿ ಪಾಲ್ಗೊಳ್ಳಬಹುದು ಎಂದು ಶಿಬಿರದ ಆಯೋಜಕರು ತಿಳಿಸಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)
- Friday
- January 10th, 2025