ವಲಯ ಅರಣ್ಯಾಧಿಕಾರಿಗಳ ಕಚೇರಿ ಸುಬ್ರಹ್ಮಣ್ಯದಲ್ಲಿ, ಮಲೆನಾಡು ಜನಹಿತರಕ್ಷಣಾ ವೇದಿಕೆಯ ವತಿಯಿಂದ ಗಡಿಗುರುತು ಹಾಗೂ ಜಂಟಿಸರ್ವೆ ಗೆ ಆಗ್ರಹಿಸಿ ರೈತರಿಂದ ಪ್ರತಿಭಟನೆ ನಡೆಯಿತು.
ಮೀರಾ ಸಾಹೇಬ್, ಚಂದ್ರಶೇಖರ ಬಾಳುಗೋಡು ಸೇರಿದಂತೆ ಮ.ಜ.ಹಿ.ರ ವೇದಿಕೆಯ ಸಂಚಾಲಕರಾದ ಕಿಶೋರ್ ಶಿರಾಡಿಯವರು ಈ ಬಗ್ಗೆ ಮಾತನಾಡಿದರು.
ರೈತರ ಭೂಮಿ ಉಳಿಯಬೇಕು,ಕೃಷಿ ಉಳಿಯಬೇಕು ಎಂದರೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಸರ್ವೇ ನಡೆಸಿ ಜನವಸತಿ ಪ್ರದೇಶಗಳನ್ನು ಬಿಟ್ಟು ಗಡಿ ಗುರುತು ಮಾಡಿ ಅದರ 100 ಮೀ ಗಳ ಆಚೆಗೆ ಬಪರ್ ಝೋನ್ ಹಾಕಬೇಕು, ರೈತರಿಗೆ ಮಾರಕವಾದ ಕಸ್ತೂರಿ ರಂಗನ್ ವರದಿಯನ್ನು ಈ ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿದ ಕಿಶೋರ್ ಶಿರಾಡಿಯವರು ವಲಯ ಅರಣ್ಯಾಧಿಕಾರಿಗಳಿಗೆ ಈ ಬಗ್ಗೆ ಮನವಿ ಪತ್ರ ನೀಡಿ ಸರಕಾರಕ್ಕೆ ಮುಟ್ಟಿಸಿ ಶೀಘ್ರ ಕ್ರಮವಹಿಸುವಂತೆ ಕೋರಿದರು. ಮುಂದಿನ ದಿನಗಳಲ್ಲಿ ಸುಳ್ಯ, ಪಂಜ,ಉಪ್ಪಿನಂಗಡಿ ಮುಂತಾದ ಕಡೆಗಳಲ್ಲಿಯೂ ವಲಯ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಲಿವೆ ಎಂದು ತಿಳಿಸಿದರು.
- Thursday
- January 9th, 2025