ಸರ್ವ ಕ್ರೈಸ್ತ ವಿಭಾಗಗಳ ಐಕ್ಯತೆ ಮತ್ತು ಕಲ್ಯಾಣ ಕಾರ್ಯಗಳನ್ನು ಮುಂದಿಟ್ಟುಕೊಂಡು ಸಂಪಾಜೆಯಲ್ಲಿ ಸರ್ವ ಕ್ರೈಸ್ತ ಸಮೂದಾಯ ಸಂಘಟನೆ ಅಸ್ತಿತ್ವಕ್ಕೆ ಬಂದಿದ್ದು, ರಾಜೇಶ್ ಡಿಸೋಜ ಹಾಗೂ ಸಂತೋಷ್ ಕ್ರಾಸ್ತಾ ಇವರುಗಳು ದೀಪ ಬೆಳಗಿಸುವ ಜ.1 ರಂದು ಉದ್ಘಾಟಿಸಿದರು. ಸಮಾಜಕ್ಕೆ ಕ್ರೈಸ್ತರ ತ್ಯಾಗ ,ಸೇವೆ ಮತ್ತು ಕೊಡುಗೆಗಳ ಅರಿವು ಮೂಡಿಸುವುದು ಮತ್ತು ಸಮೂದಾಯದ ಧಮನಿತರು ಮತ್ತು ದೀನರಿಗೆ ನೆರವಾಗುವುದು ಹಾಗೂ ಸಮಾಜದ ಸೌಹಾರ್ದತೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ಸಂಘಟನೆಯ ಆಶಯ, ಇದಕ್ಕಾಗಿ ಎಲ್ಲಾ ಕ್ರೈಸ್ತ ಬಾಂಧವರನ್ನು ಒಗ್ಗೂಡಿಸಲಾಗುವುದು ಎಂದು ಸಂಘಟನೆಯ ಪ್ರಮುಖರಾದ ರಾಜೇಶ್ ಡಿಸೋಜ ಹಾಗು ಲೂಕಾಸ್ ಟಿ.ಐ, ಲ್ಯಾನ್ಸಿ ಡಿಸೋಜ ಹೇಳಿದರು. ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ಮೈಕೆಲ್ ಪಾಯಸ್ ,ಎಡ್ವೊಕೇಟ್ ಡೋಮಿನಿಕ್, ಸಂತೋಷ್ ಕ್ರಾಸ್ತಾ, ಬೆಂಜಮಿನ್ ಡಿಸೋಜ , ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯೆ ಲಿಸ್ಸಿ ಮೊನಾಲಿಸಾ ,ಜಾನಿ ಮತ್ತಿತರರು ಉಪಸ್ತಿತರಿದ್ದರು.
- Friday
- January 10th, 2025