Ad Widget

ಎಲಿಮಲೆ : ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಭೆ – ಅಭ್ಯಾಸ ವರ್ಗ

. . . . . . . . .

ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಸುಳ್ಯ ತಾಲೂಕಿನ ಕಸ್ತೂರಿ ರಂಗನ್ ವರದಿ ಭಾದಿತ ಗ್ರಾಮಗಳ, ಮ.ಜ.ಹಿ.ರ.ವೇ ಯ ಕಾರ್ಯಕರ್ತರ ಅಭ್ಯಾಸ ವರ್ಗ ಇಂದು ನೆಲ್ಲೂರು ಕೆಮ್ರಾಜೆ ಸೊಸೈಟಿ ಹಾಲ್ ನಲ್ಲಿ ನಡೆಯಿತು.

ಮ.ಜ.ಹಿ.ರ.ವೇ ಯ ಸುಳ್ಯ ತಾಲೂಕಿನ ಸಂಚಾಲಕರಾದ  ಚಂದ್ರಶೇಖರ ಬಾಳುಗೋಡು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸಹಕಾರಿ ಸಂಘದ ಅಧ್ಯಕ್ಷರಾದ ವಿಷ್ಣು ಭಟ್ ಕಾರ್ಯಕ್ರಮ ಉದ್ಘಾಟಿಸಿ ಸುಭಾಶ್ಚಂದ್ರ ಬೋಸ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮ.ಜ.ಹಿ.ರ.ವೇ ಯ ಹೋರಾಟದ ಇತಿಹಾಸವನ್ನು ಮೆಲುಕು ಹಾಕಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಶ್ರೀಮತಿ ಪುಷ್ಪಾಮೇದಪ್ಪ ವಂದೇಮಾತರಮ್ ಗೀತೆ ಹಾಡಿದರು. ವೆಂಕಟ್ ದಂಬೆಕೋಡಿ, ಭರತ್ ಮುಂಡೋಡಿ ಅರಣ್ಯ ಇಲಾಖೆಯ ಕಾಯ್ದೆಗಳು ಹಾಗೂ ಅದರ ಸಾಧಕ- ಬಾಧಕ ಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡು ಮ.ಜ.ಹಿ.ರ ವೇ ಯ ಎಲ್ಲಾ ಹೋರಾಟಗಳಿಗೆ ಬೆಂಬಲ ಸೂಚಿಸುವುದಾಗಿ ಹೇಳಿದರು.

ಸಭಾಕರ್ಯಕ್ರಮದ ನಂತರ ಎರಡು ಅವಧಿಗಳ ಅಭ್ಯಾಸವರ್ಗಾವನ್ನು ಸಂಘಟನೆಯ ಸಂಚಾಲಕರಾದ ಕಿಶೋರ್ ಶಿರಾಡಿ ನಡೆಸಿಕೊಟ್ಟರು. ಸಂಘಟನಾತ್ಮಕ ವಿಚಾರ ಹಾಗೂ ಅರಣ್ಯ ಇಲಾಖೆಯ ಕಾಯ್ದೆಗಳು ಹಾಗೂ ಜನಸಾಮಾನ್ಯರ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.‌ಹಾಗೂ ಜ.08 ರಂದು  ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ಕಚೇರಿಯ ಮುಂದೆ ನಡೆಯುವ ಹಕ್ಕೊತ್ತಾಯ ಪ್ರತಿಭಟನೆಯ ವಿಚಾರವಾಗಿ ಮಾಹಿತಿಗಳನ್ನು ನೀಡಿದರು.

ಸುಳ್ಯ ತಾಲೂಕಿನ ಸುಮಾರು 14 ಗ್ರಾಮದ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!