
ಜಯನಗರದ ನಿಸರ್ಗ ಮಸಾಲೆ ಫ್ಯಾಕ್ಟರಿ ಬಳಿ ಇರುವ ಮಂತ್ರವಾದಿ ಗುಳಿಗನ ಕಟ್ಟೆಯಲ್ಲಿ ಪ್ರತಿಷ್ಠ ದಿನದ ಅಂಗವಾಗಿ ಇಂದು ವಿಶೇಷ ಅಲಂಕಾರ ಪೂಜೆ ನೆರವೇರಿತು. ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು . ಅನ್ನದಾನದ ಸೇವೆಯನ್ನು ವಿವೇಕಾನಂದ ಜಯನಗರ ಹಾಗೂ ಸಿಹಿ ತಿಂಡಿಯನ್ನು ನಾಗೇಶ್ ರುಚಿ ಬೇಕರಿ ಸುಳ್ಯ, ಧ್ವನಿ ಮತ್ತು ವಿದ್ಯುತ್ ದೀಪ ಅಲಂಕಾರವನ್ನು ಶ್ರೀಧರ್ ,ಸ್ವಾಮಿ ಸೌಂಡ್ಸ್ ಸುಳ್ಯ ಇವರು ಸೇವಾ ರೂಪದಲ್ಲಿ ನೀಡಿದರು. ನಿಸರ್ಗ ಇಂಡಸ್ಟ್ರಿಯ ನೌಕರರು ಅನ್ನದಾನದಲ್ಲಿ ಮತ್ತು ಸ್ವಚ್ಛತೆಯಲ್ಲಿ ಸಹಕರಿಸಿದರು. ಪ್ರತಿಷ್ಠಾ ದಿನದ ಪೂಜಾ ಸೇವೆಯನ್ನು ಧನಂಜಯ ಪಂಡಿತ್ ನೆರವೇರಿಸಿದರು. ಗೌತಮ್ ಭಟ್ ,ಗುರುಪ್ರಸಾದ್, ಸಹಕರಿಸಿದ್ದರು. ನಿಸರ್ಗ ಇಂಡಸ್ಟ್ರಿಯ ಮಾಲಕ ಕಸ್ತೂರಿ ಶಂಕರ್ ಹಾಗೂ ಜಯನಗರದ ಭಕ್ತಾದಿಗಳು ಉಪಸ್ಥಿತರಿದ್ದರು.
