ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಉಪಯೋಗವಾಗಬೇಕೆಂಬ ಸದುದ್ದೇಶದಿಂದ ಹರಿಹರ ಪಳ್ಳತ್ತಡ್ಕದ ಸಚಿನ್ ಕ್ರೀಡಾ ಸಂಘ ಹಾಗೂ ದಾನಿಗಳ ಸಹಕಾರದೊಂದಿಗೆ ನೂತನವಾಗಿ ಖರೀದಿಸಿದ ಅಂಬ್ಯುಲೆನ್ಸ್ ವಾಹನದ ಲೋಕಾರ್ಪಣೆ ಕಾರ್ಯಕ್ರಮವು ಜ.02 ರಂದು ಹರಿಹರ ಪಳ್ಳತ್ತಡ್ಕದಲ್ಲಿ ನಡೆಯಿತು.
ಬೆಳಿಗ್ಗೆ ಅಂಬ್ಯುಲೆನ್ಸ್ ವಾಹನವನ್ನು ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನಕ್ಕೆ ತಂದು ಪೂಜೆ ನೆರವೇರಿಸಿ ನಂತರ ಎಲ್ಲಪಡ್ಕದ ಶ್ರೀ ಗುಳಿಗರಾಜನ ಕಟ್ಟೆಯ ಬಳಿ ತೆಂಗಿನಕಾಯಿಯನ್ನು ಒಡೆದು ಹರಿಹರ ಪೇಟೆಯ ಸಭಾಂಗಣಕ್ಕೆ ತರಲಾಯಿತು.
ಹಿರಿಯ ವೈದ್ಯರಾದ ಡಾ| ಚಂದ್ರಶೇಖರ ಕಿರಿಭಾಗ ರವರು ದೀಪ ಬೆಳಗಿಸುವುದರ ಮೂಲಕ ನೂತನ ಅಂಬ್ಯುಲೆನ್ಸ್ ಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ವೈದ್ಯರಾದ ಡಾ| ಗಿರೀಶ್ ಉರಿಮಜಲು, ಕೊಲ್ಸಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ| ಕುಲದೀಪ್.ಎಂ.ಡಿ, ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯ ಕುಮಾರ್ ಅಂಙಣ ಹಾಗೂ ಸಚಿನ್ ಕ್ರೀಡಾ ಸಂಘದ ಅಧ್ಯಕ್ಷರಾದ ಜಗದೀಶ್ ವಾಡ್ಯಪ್ಪನಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿತ್ಯಾನಂದ ಭೀಮಗುಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು. ಮನೀಶ್ ಪಲ್ಲತ್ತಡ್ಕ ವಂದನಾರ್ಪಣೆ ಮಾಡಿದರು.(ವರದಿ : ಉಲ್ಲಾಸ್ ಕಜ್ಜೋಡಿ)
- Thursday
- January 9th, 2025