ಅಂತೂ 2024ನೇ ವರ್ಷ ಮುಗಿದು 2025ನೇ ನೂತನ ವರ್ಷದ ಹೊಸ್ತಿಲಿನಲ್ಲಿ ನಾವಿಂದು ನಿಂತಿದ್ದೇವೆ. ನಾವೆಲ್ಲರೂ 2024ನೇ ವರ್ಷಕ್ಕೆ ವಿದಾಯ ತಿಳಿಸಿ 2025ನೇ ವರ್ಷದತ್ತ ಹೋಗುತ್ತಿರುವ ಈ ಸಂದರ್ಭದಲ್ಲಿ 2024ನೇ ವರ್ಷವು ನಮ್ಮ ಬದುಕಿನಲ್ಲಿ ಏನೇನು ಬದಲಾವಣೆಗಳನ್ನು ತಂದಿದೆ, 2024ನೇ ವರ್ಷದಲ್ಲಿ ನಮ್ಮ ಜೀವನದಲ್ಲಿ ಏನೇನು ಘಟನಾವಳಿಗಳು ನಡೆದಿವೆ ಎಂದು ನಾವು ಒಂದು ಕ್ಷಣ ಯೋಚಿಸಿ ಮೆಲುಕು ಹಾಕಿದಾಗ ಹಲವಾರು ವಿಷಯಗಳು, ಹಲವಾರು ಘಟನೆಗಳು ನಮ್ಮ-ನಿಮ್ಮೆಲ್ಲರ ಕಣ್ಮುಂದೆ ಬರಬಹುದು. ಉದಾಹರಣೆಗೆ 2024ನೇ ವರ್ಷದಲ್ಲಿ ನಾವು ನಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟ-ನೋವುಗಳು, ನಾವು ಇತರರ ಮೇಲೆ ಸಾಧಿಸಿದ ದ್ವೇಷ, ವಿನಾಃಕಾರಣ ನಾವು ಇತರರ ಮೇಲೆ ತೋರಿದ ಸಿಟ್ಟು-ಕೋಪ, ವರ್ಷಪೂರ್ತಿ ನಾವು ತಿಳಿದೋ-ತಿಳಿಯದೆಯೋ ಮಾಡಿದಂತಹ ಅನೇಕ ತಪ್ಪುಗಳು ಹೀಗೆ ವಿವಿಧ ರೀತಿಯ ಘಟನೆಗಳು ನಮ್ಮೆಲ್ಲರ ಕಣ್ಮುಂದೆ ಬರುತ್ತಲೇ ಇರಬಹುದು. ಹಾಗೆಂದು ನಾವು ಮತ್ತೆ 2024ನೇ ವರ್ಷಕ್ಕೆ ಹಿಂತಿರುಗಿ ಹೋಗಿ ಆ ಎಲ್ಲಾ ಘಟನೆಗಳನ್ನು ಸರಿಪಡಿಸಲು ಸಾಧ್ಯವಿಲ್ಲ. ಏಕೆಂದರೆ “ಮುಗಿದುಹೋದ ಆಯುಷ್ಯವನ್ನು ಹಾಗೂ ಕಳೆದುಹೋದ ಸಮಯವನ್ನು ಮತ್ತೆ ಎಂದಿಗೂ ಹಿಂತಿರುಗಿ ತರಲು ಸಾಧ್ಯವಿಲ್ಲ.” ಆದ್ದರಿಂದ ಇನ್ನು ಮುಂದಾದರೂ ನಾವು ನಮ್ಮ ಬದುಕಿನಲ್ಲಿ ಬರುವಂತಹ ಕಷ್ಟ-ನೋವುಗಳನ್ನು ನಮ್ಮ ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳುತ್ತಾ, ಯಾರನ್ನೂ ದ್ವೇಷಿಸದೇ, ವಿನಾಃಕಾರಣ ಯಾರ ಮೇಲೂ ಕೋಪಿಸಿಕೊಳ್ಳದೇ ಬದುಕಿರುವಷ್ಟು ಸಮಯ ಎಲ್ಲರನ್ನೂ ಪ್ರೀತಿಸುತ್ತಾ, ಸಾಧ್ಯವಾದಷ್ಟು ಪ್ರತಿಯೊಬ್ಬರ ಕಷ್ಟ-ನೋವುಗಳಿಗೆ ಸ್ಪಂದಿಸುತ್ತಾ ನಿಸ್ವಾರ್ಥ ಮನಸ್ಸಿನಿಂದ ಮುಂದೆ ಸಾಗೋಣ…✍️ಉಲ್ಲಾಸ್ ಕಜ್ಜೋಡಿ
- Friday
- January 10th, 2025