ಕೆವಿಜಿ ಇಂಜಿನಿಯರಿಂಗ್ ಕಾಲೇಜು ಸಿವಿಲ್ ಇಂಜಿನಿಯರಿಂಗ್ ವಿಭಾಗ ಹಾಗೂ ಅದಾನಿ ಸಿಮೆಂಟ್ ಇವರ ಸಹಯೋಗದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಸುಳ್ಯದ ಕಟ್ಟಡ ಗುತ್ತಿಗೆದಾರರಿಗೆ ‘Skill development’ ಕಾರ್ಯಕ್ರಮವು ಡಿಸೆಂಬರ್ 27 ಶುಕ್ರವಾರದಂದು ಬೆಳಿಗ್ಗೆ 10.00 ಕ್ಕೆ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಅದಾನಿ ಸಿಮೆಂಟ್ ನ ಟೆಕ್ನಿಕಲ್ ಹೆಡ್ ER ಹಿತೇಶ್ ಪ್ರಸಾದ್ ಇವರು “ಕೌಶಲ್ಯ ಅಭಿವೃದ್ಧಿ”ಗಳ ಬಗ್ಗೆ ವಿಶೇಷ ತರಬೇತಿಯನ್ನು ನೀಡಲಿದ್ದಾರೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಇಂಜಿನಿಯರಿಂಗ್ ಕಾಲೇಜಿನ ಸಿ.ಇ.ಓ.ಡಾ.ಉಜ್ವಲ್.ಯು.ಜೆ, ಪ್ರಾಂಶುಪಾಲರಾದ ಡಾ.ಸುರೇಶ್.ವಿ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಚಂದ್ರಶೇಖರ್.ಎ, ಕರ್ನಾಟಕದ ಅದಾನಿ ಸಿಮೆಂಟ್ ಇದರ ಮಂಗಳೂರು ಏರಿಯಾ ಹೆಡ್ Er. ರಜತ್ ವಿ ಜಿ ಹಾಗೂ ಗುತ್ತಿಗೆದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
- Thursday
- January 9th, 2025