ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ಇವುಗಳ ಸಹಭಾಗಿತ್ವದಲ್ಲಿ ಡಿ.27 ಶುಕ್ರವಾರದಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಉಚಿತ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಆಧಾರ್ ನೋಂದಣಿ ಹಾಗೂ ತಿದ್ದುಪಡಿಗೆ ಬೇಕಾದ ದಾಖಲಾತಿಗಳ ವಿವರಗಳು ಈ ಕೆಳಗಿನಂತಿವೆ.
10 ವರ್ಷಗಳ ಹಿಂದಿನ ಆಧಾರ್ ಕಾರ್ಡ್ ನವೀಕರಣಕ್ಕಾಗಿ : ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಪಾಸ್ ಪೋರ್ಟ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ.
ಹೆಸರು ಬದಲಾವಣೆಗಾಗಿ : ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಅಂಕಪಟ್ಟಿ, ಜನನ ಪ್ರಮಾಣಪತ್ರ, ಪಡಿತರ ಚೀಟಿ, ಪಾಸ್ ಪೋರ್ಟ್ .
ಜನ್ಮದಿನಾಂಕ ಬದಲಾವಣೆಗಾಗಿ : ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಜನನ ಪ್ರಮಾಣಪತ್ರ, ಪಾಸ್ ಪೋರ್ಟ್.
ವಿಳಾಸ ಬದಲಾವಣೆಗಾಗಿ : ಪಂಚಾಯತ್ ವಿಳಾಸ ದೃಢೀಕರಣ ಪತ್ರ, ತಹಶೀಲ್ದಾರ್ ಅಥವಾ ಗೆಜೆಟೆಡ್ ಆಫೀಸರ್ ಸರ್ಟಿಫಿಕೇಟ್, ಮತದಾರರ ಗುರುತಿನ ಚೀಟಿ, ಪಾಸ್ ಪೋರ್ಟ್.
ಮೊಬೈಲ್ ಸಂಖ್ಯೆ ನೋಂದಣಿ ಹಾಗೂ ಬದಲಾವಣೆಗಾಗಿ : ಆಧಾರ್ ಕಾರ್ಡ್, ಮೊಬೈಲ್.
5 ಮತ್ತು 15 ವರ್ಷ ಹೊಂದಿದ ಮಕ್ಕಳ ಬಯೋಮೆಟ್ರಿಕ್ ಅಪ್ಡೇಟ್ ಗಾಗಿ : ಆಧಾರ್ ಕಾರ್ಡ್.
ಆಧಾರ್ ನೋಂದಣಿಗಾಗಿ (0 ಯಿಂದ 18 ವರ್ಷದವರಿಗೆ ಮಾತ್ರ) : ಜನ್ಮದಿನಾಂಕ ದಾಖಲೆ, ವಿಳಾಸ ದಾಖಲೆ ತರತಕ್ಕದ್ದು ಎಂದು ತಿಳಿಸಲಾಗಿದ್ದು, ಯು.ಐ.ಡಿ.ಎ.ಐ ನಿಂದ ನಿಗದಿತವಾದ ಸೂಕ್ತ ದಾಖಲೆಗಳ ಮೂಲ ಪ್ರತಿಗಳನ್ನು ತರತಕ್ಕದ್ದು ಎಂದು ಶಿಬಿರದ ಆಯೋಜಕರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)