ಕೊಲ್ಲಮೊಗ್ರದ ಅಯ್ಯಪ್ಪ ಸ್ವಾಮಿಯ ರಜತ ರೇಖಾ ಚಿತ್ರದ ಸ್ಥಾಪನೆ ಹಾಗೂ ಮಂದಿರದ ಸಭಾಭವನ “ಶ್ರೀ ಮಯೂರ ಕಲಾಮಂದಿರ” ದ ನವೀಕಕರಣ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಸುಮಾರು 35 ಲಕ್ಷ ರೂ ವೆಚ್ಚದ ವಿವಿಧ ಯೋಜನೆ ಹಾಕಿಕೊಳ್ಳಲಾಗಿದೆ. ಗ್ರಾಮ ಪಂಚಾಯತ್, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಕ್ಷೇತ್ರ ಅಭಿವೃದ್ಧಿಯಾಗಲಿದೆ. ಹಾಗೂ ಊರವರ ಕಾರ್ಯಕ್ರಮಗಳಿಗೆ ಕನಿಷ್ಠ ದರದಲ್ಲಿ ಹಾಲ್ ನೀಡುತ್ತೇವೆ ಎಂದು ಅಯ್ಯಪ್ಪ ಮಂದಿರದ ಆಡಳಿತ ಮೊಕ್ತೇಸರರಾದ ಮಾಧವ ಚಾಂತಾಳ ತಿಳಿಸಿದ್ದಾರೆ.
ಅಯ್ಯಪ್ಪ ಮಂದಿರದಲ್ಲಿ ಈ ಹಿಂದೆ ಶಿಲಾ ಮೂರ್ತಿ ಪ್ರತಿಷ್ಠಾಪಿಸಿದ್ದು ಪ್ರಶ್ನಾ ಚಿಂತನೆಯಲ್ಲಿ ಸರಿಯಲ್ಲ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಅದರ ಬದಲು ಅಯ್ಯಪ್ಪ ಸ್ವಾಮಿಯ ರಜತ ರೇಖಾ ಚಿತ್ರದ ಸ್ಥಾಪನೆ ಮಾಡಲಿದ್ದೇವೆ. ಮಂದಿರದ ಹಾಲ್ ಗೆ ಟೈಲ್ಸ್ ಅಳವಡಿಕೆ ಪ್ರಗತಿಯಲ್ಲಿದ್ದು, ಇನ್ನೂಳಿದ ಟ್ಯಾಯ್ಲೆಟ್, ಪಾಕಶಾಲೆ ರಚನೆ, ಕಾಮಗಾರಿಗಳನ್ನು ಹಂತಹಂತವಾಗಿ ಮಾಡುತ್ತೇವೆ. ಡಿ 25 ಮತ್ತು 26 ರಂದು 50 ನೇ ವರ್ಷದ ಅಯ್ಯಪ್ಪ ಸ್ವಾಮಿಯ ಪೂಜೋತ್ಸವ, ಪಾಲ್ ಕೊಂಬು ಮೆರವಣಿಗೆ, ಅಪ್ಪಸೇವೆ, ಅಯ್ಯಪ್ಪ ಸ್ವಾಮಿಯ ರಜತ ರೇಖಾ ಚಿತ್ರದ ಸ್ಥಾಪನೆ ನಡೆಯಲಿದೆ ಅವರು ತಿಳಿಸಿದ್ದಾರೆ.