ಶಕ್ತಿರೂಪಿಣಿಯಾಗಿರತಕ್ಕಂತಹ ಶ್ರೀ ಕಾಳಿಕಾ ಮಾತೆಯ ‘ಜಗನ್ಮಾತೆ ಕಾಳಿಕಾಂಬೆ’ ಎಂಬ ಕನ್ನಡ ಭಕ್ತಿಗೀತೆಯು ಮಂಗಳೂರಿನಲ್ಲಿ ಬಿಡುಗಡೆಗೊಂಡಿತು. ಮಂಗಳೂರಿನ ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಹಮ್ಮಿಕೊಂಡ ವಿಶ್ವಕರ್ಮ ಕಲಾ ಸಿಂಚನ ಸಾಂಸ್ಕೃತಿಕ ವೇದಿಕೆಯ ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಶ್ರೀ ಕೆ ಕೆ ಆಚಾರ್ಯ, ಶ್ರೀ ವಿಶ್ವಕರ್ಮ ಕಲಾ ಪರಿಷತ್ತಿನ ಗೌರವಾಧ್ಯಕ್ಷರಾದ ಶ್ರೀ ಪಿ ಎನ್ ಆಚಾರ್ ಹಾಗೂ ಶ್ರೀ ವಿಶ್ವಕರ್ಮ ಕಲಾ ಪರಿಷತ್ತಿನ ಅಧ್ಯಕ್ಷರಾದ ಡಾಕ್ಟರ್ ಎಸ್ ಪಿ ಗುರುದಾಸ್ ರವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ವಿಶ್ವಕರ್ಮ ಸಹಕಾರ ಬ್ಯಾಂಕ್ ಹಾಗೂ ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಡಾ.ಎಸ್ ಆರ್ ಹರೀಶ್ ಆಚಾರ್ಯ, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀಮತಿ ವನಿತ ಪ್ರಸಾದ್ ಇವರು ಹಾಗೂ ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನ ಮಂಗಳೂರು ಇದರ ಮಾಜಿ ಆಡಳಿತ ಮೊಕ್ತೇಸರಾದ ಶ್ರೀ ನಾಗರಾಜ ಆಚಾರ್ಯ ಮಂಗಳ ದೇವಿ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಈ ಭಕ್ತಿಗೀತೆಗೆ
ನಿರಂಜನ್ ಕಡ್ಲಾರುರವರ ಸಾಹಿತ್ಯವಿದ್ದು, ಮಿಥುನ್ ರಾಜ್ ವಿದ್ಯಾ ಪುರ ರವರ ಸಂಗೀತ ನಿರ್ದೇಶನವಿದೆ. ಕಿಶೋರ್ ಪೆರ್ಲ ಮತ್ತು ಅಂಕಿತಾ ಆಚಾರ್ಯ ಕಡ್ಲಾರುರವರ ಸುಮಧುರ ಗಾಯನವಿದ್ದು. ಗಿರೀಶ್ ಆಚಾರ್ಯ ಬೈತಡ್ಕ ರವರ ಸಂಕಲನವಿದೆ. ಈ ಭಕ್ತಿ ಗೀತೆಯನ್ನು N A Times ಯೂಟ್ಯೂಬ್ ಚಾನೆಲ್ ನಲ್ಲಿ ನೋಡಬಹುದು.
- Wednesday
- December 18th, 2024