ಶ್ರೀ ಕೋಟಿ ಚೆನ್ನಯ ಬ್ರಹ್ಮ ಬೈದರ್ಕಳ ಗರಡಿ ಶೇಣಿ ಇದರ ನೂತನ ಚಪ್ಪರ ಕೊಂಬು ಬೆಳ್ಳಿಯ ಆಭರಣ ನಿರ್ಮಾಣದ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ ಗರಡಿಯಲ್ಲಿ ನಡೆಯಿತು. ಪ್ರಗತಿಪರ ಕೃಷಿಕ ವೆಂಕಟೇಶ್ ಹೆಬ್ಬಾರ್ ಶೇಣಿ ಮನವಿ ಪತ್ರ ಬಿಡುಗಡೆಗೊಳಿಸಿ ಶುಭಹಾರೈಸಿದರು. ಚಪ್ಪರ ಕೊಂಬು ಸಮಿತಿ ಗೌರವಧ್ಯಕ್ಷ ಕರಿಯಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಮುಖಂಡ ರಾಧಾಕೃಷ್ಣ ಬೊಳ್ಳೂರು, ಲೋಕೇಶ್ ಪೂಜಾರಿ ತಳೂರು, ರವಿಕುಮಾರ್ ಹೊನ್ನಕಡಪು, ವೃಜೇಶ್ ರೈ ಶೇಣಿ, ನವೀನ್ ಸಾರಕೆರೆ ಉಪಸ್ಥಿತರಿದ್ದರು. ಚಪ್ಪರ ಕೊಂಬು ಸಮಿತಿ ಅಧ್ಯಕ್ಷ ವಿವೇಕ್ ರೈ ಶೇಣಿ ವಂದಿಸಿದರು. ಗರಡಿಯ ಅನುವಂಶಿಕ ಆಡಳ್ತೇದಾರ ಬಿ. ಕೆ ಧರ್ಮಪಾಲ ಶೇಣಿ ಕಾರ್ಯಕ್ರಮ ನಿರ್ವಹಿಸಿದರು..
- Tuesday
- January 7th, 2025