ಅರಂತೋಡು : ಪುತ್ತೂರು ಭಾಗದಿಂದ ಮಂಡ್ಯ ಮೈಸೂರು ಕಡೆಗೆ ಅಕ್ರಮವಾಗಿ ದನ ಸಾಗಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭಜರಂಗದಳವು ತಡೆಯೊಡ್ಡಿ ವಾಹನವನ್ನು ಇದೀಗ ಸುಳ್ಯ ಪೋಲಿಸರಿಗೆ ಒಪ್ಪಿಸಿದ ಘಟನೆ ಇದೀಗ ನಡೆದಿದೆ. ಎರಡು ವಾಹನಗಳಲ್ಲಿ 5 ಹೋರಿಗಳು ಹಾಗು 2 ಹಸುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರೆನ್ನಲಾಗಿದೆ.
ವಾಹನ ಚಾಲಕರು ಸೇರಿದಂತೆ ಮೂವರನ್ನು ಪೋಲಿಸರು ಇದೀಗ ಠಾಣೆಗೆ ಕರೆತಂದಿದ್ದು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ತನಿಖೆ ವೇಳೆಯಲ್ಲಿ ಮೊಬೈಲ್ ನಲ್ಲಿ ಕೈ ಬರಹದಲ್ಲಿರುವ ಚೀಟಿ ಮಾತ್ರ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.