ಯುವಕ ಮಂಡಲ (ರಿ) ಕನಕಮಜಲು, ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ (ಕಾವಾ) ಮೈಸೂರು ಆಶ್ರಯದಲ್ಲಿ ನಡೆದ ಸು-ಯೋಗ 2024 ನಿಸರ್ಗ ಚಿತ್ರಕಲಾ ಶಿಬಿರದ ಸಮಾರೋಪ ಸಮಾರಂಭವು ಡಿ. 08 ರಂದು ಶ್ರೀ ಬಾಲ ನಿಲಯ ಮೂರ್ಜೆ ಕನಕಮಜಲು ನಡೆಯಿತು.
ಸಮಾರೋಪ ಸಮಾರಂಭದ ಸಭಾಧ್ಯಕ್ಷತೆಯನ್ನು ಕು| ಭಾಗೀರಥಿ ಮುರುಳ್ಯ ಮಾನ್ಯ ಶಾಸಕರು ಸುಳ್ಯ ವಿಧಾನಸಭಾ ಕ್ಷೇತ್ರ ವಹಿಸಿದರು. ಮುಖ್ಯ ಅಥಿತಿಗಳಾಗಿ ನರೇಂದ್ರ ರೈ ದೇರ್ಲ ನಿವೃತ್ತ ಕನ್ನಡ ಪ್ರಾಧ್ಯಾಪಕರು, ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ನಿರ್ದೇಶಕ ಪ್ರಸಾದ್ ಕಾಟೂರು, ಕಾರ್ಯಕ್ರಮ ಸಂಯೋಜಕರಾದ ಬಾಲಚಂದ್ರ ನೆಡಿಲು ಮತ್ತು ಅವಿನ್ ಮಳಿ, ಯುವಕ ಮಂಡಲ ಅಧ್ಯಕ್ಷ ಹರ್ಷಿತ್ ಉಗ್ಗಮೂಲೆ, ಕಾರ್ಯದರ್ಶಿ ಅಶ್ವಥ್ ಅಡ್ಕಾರ್, ಕಾವಾ ಕಾಲೇಜ್ ಮೈಸೂರು ಇದರ ಸಾಂಸ್ಕೃತಿಕ ಕಾರ್ಯದರ್ಶಿ ಸ್ಕಂದ ಭಾರದ್ವಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯುವಕ ಮಂಡಲದ ಎಲ್ಲಾ ಪೂರ್ವಾಧ್ಯಕ್ಷರಿಗಳು, ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಕಾವಾ ಕಾಲೇಜಿನ ಶಿಬಿರಾರ್ಥಿಗಳು, ಊರಿನ ಕಲಾಪ್ರೇಮಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ದಾಮೋದರ ಕಣಜಾಲು ನಿರೂಪಿಸಿದರು.
- Thursday
- December 12th, 2024