Ad Widget

ವೀಕ್ಷಕ ವಿವರಣೆಗಾರ ನಿರಂತ್ ದೇವಶ್ಯ ಇವರಿಗೆ ಜಿಲ್ಲಾ ಕಲಾ ರತ್ನ ಪ್ರಶಸ್ತಿ

ಕ್ರೀಡಾಕ್ಷೇತ್ರದ ಎಲ್ಲಾ ಕ್ರೀಡೆಗಳ ವೀಕ್ಷಕ ವಿವರಣೆಯನ್ನು ನೀಡುತ್ತಿರುವ ಗುತ್ತಿಗಾರಿನ ನಿರಂತ್ ದೇವಶ್ಯ ಇವರಿಗೆ ಮ್ಯಾಕ್ಸ್ ಲೈಫ್ ಮತ್ತು ಆಕ್ಸಿಸ್‌ ಬ್ಯಾಂಕ್ ನೀಡುವ ಜಿಲ್ಲಾ ಕಲಾ ರತ್ನ ಪ್ರಶಸ್ತಿ ಗೆ ಭಾಜನರಾಗಿದ್ದಾರೆ.  ಕ್ರೀಡಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ, ದಕ್ಷಿಣಕನ್ನಡ ಜಿಲ್ಲಾ  “ಕಲಾ ರತ್ನ” ಪ್ರಶಸ್ತಿಯನ್ನು ಮಂಗಳೂರಿನ ಅತ್ತಾವರದಲ್ಲಿರುವ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ನ ಕೇಂದ್ರ ಕಛೇರಿಯಲ್ಲಿ ನಡೆದ ವ್ಯಾಲ್ಯೂ ಅವಾರ್ಡ್ ಸೆರಮನಿ (Value Award Ceremony ) ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಯಿತು. ನವೆಂಬರ್ 22 ರಂದು ಮ್ಯಾಕ್ಸ್ ಲೈಫ್ ಮತ್ತು ಆಕ್ಸಿಸ್‌ ಬ್ಯಾಂಕ್ ಸಹಯೋಗದಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು..ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.‌ ನಿರಂತ್ ದೇವಶ್ಯ ಅವರು ಹಲವಾರು ವರ್ಷಗಳಿಂದ ದಕ್ಷಿಣಕನ್ನಡ, ಕೊಡಗು, ಕಾಸರಗೋಡು ಜಿಲ್ಲೆಯ ಅನೇಕ ಪಂದ್ಯಾಟಗಳಲ್ಲಿ ವೀಕ್ಷಕವಿವರಣೆಯನ್ನು ನೀಡುತ್ತಿದ್ದಾರೆ.‌ ಇವರು ಗುತ್ತಿಗಾರು ಗ್ರಾಮದ ದೇವಶ್ಯ ದಿವಂಗತ ಡಿ.ಜೆ ರಾಧಾಕೃಷ್ಣ ಮತ್ತು ಜಯಂತಿ ಇವರ ಸುಪುತ್ರ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading