ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ನ.23 ರಂದು ನಡೆಯಲಿದ್ದು, ಇದರ ಅಂಗವಾಗಿ ನ.17 ರಂದು ಬೃಹತ್ ಉಚಿತ ವೈದ್ಯಕೀಯ ಶಿಬಿರ ಹಾಗೂ ನ.18 ರಂದು ಕ್ರೀಡಾಕೂಟ ನಡೆಯಲಿದೆ.
ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆ, ದೇರಳಕಟ್ಟೆ-ಮಂಗಳೂರು ಇವರ ಸಹಭಾಗಿತ್ವದಲ್ಲಿ ನ.17 ರಂದು ಬೆಳಿಗ್ಗೆ 9:30 ರಿಂದ ಮದ್ಯಾಹ್ನ 1:00 ಗಂಟೆಯವರೆಗೆ ಸಂಘದ ಸಭಾಭವನದಲ್ಲಿ ಬೃಹತ್ ಉಚಿತ ವೈದ್ಯಕೀಯ ಶಿಬಿರ ನಡೆಯಲಿದ್ದು, ಸಂಘದ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಉದ್ಯಮಿಗಳಾದ ಉಮೇಶ್ ಮುಂಡೋಡಿ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವೈದ್ಯರಾದ ಡಾ| ಮಹಾಲಿಂಗೇಶ್ವರ ಭಟ್ ಉಪಸ್ಥಿತರಿರಲಿದ್ದಾರೆ.
ಶಿಬಿರದಲ್ಲಿ ಮಕ್ಕಳ ರೋಗ ತಪಾಸಣೆ, ಸಾಮಾನ್ಯ ರೋಗ ತಪಾಸಣೆ, ಕಿವಿ-ಮೂಗು-ಗಂಟಲು ತಪಾಸಣೆ, ಎಲುಬು ಹಾಗೂ ಕೀಲು ತಪಾಸಣೆ, ಚರ್ಮರೋಗ ತಪಾಸಣೆ, ಮಧುಮೇಹ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ, ಔಷಧ ವಿತರಣೆ ಹಾಗೂ ಅಗತ್ಯವಿರುವವರಿಗೆ ಇ.ಸಿ.ಜಿ ಸೌಲಭ್ಯ ದೊರೆಯಲಿದೆ.
ನ.18 ರಂದು ಶತಮಾನೋತ್ಸವದ ಅಂಗವಾಗಿ ಕ್ರೀಡಾಕೂಟ
ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವದ ಅಂಗವಾಗಿ ನ.18 ರಂದು ಪೂರ್ವಾಹ್ನ 09 ಗಂಟೆಯಿಂದ ಗುತ್ತಿಗಾರು ಪಿ.ಯಂ.ಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಗುತ್ತಿಗಾರು, ದೇವಚಳ್ಳ ಮತ್ತು ನಾಲ್ಕೂರು ಗ್ರಾಮಗಳ ಸಂಘದ ಸದಸ್ಯರು ಮತ್ತು ಸಾರ್ವಜನಿಕರಿಗಾಗಿ ಕ್ರೀಡಾಕೂಟ ನಡೆಯಲಿದ್ದು, ಸಂಘದ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ದೈಹಿಕ ಶಿಕ್ಷಕರಾದ ಜಯರಾಮ್ ಕಡ್ಲಾರು ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮಿತ್ರಾ ಮೂಕಮಲೆ ಹಾಗೂ ನಿವೃತ್ತ ಮುಖ್ಯ ಶಿಕ್ಷಕರಾದ ದಯಾನಂದ ಮುತ್ಲಾಜೆ ಉಪಸ್ಥಿತರಿರಲಿದ್ದಾರೆ.
ಕ್ರೀಡಾಕೂಟದ ವಿವರ : ಪುರುಷರಿಗೆ ವಾಲಿಬಾಲ್, ಹಗ್ಗಜಗ್ಗಾಟ, ಲಗೋರಿ, ಶಾಟ್ ಪುಟ್, ಲಕ್ಕಿಗೇಮ್ ನಡೆಯಲಿದ್ದು, ಮಹಿಳೆಯರಿಗೆ ಲಗೋರಿ, ಹಗ್ಗಜಗ್ಗಾಟ, ಶಾಟ್ ಪುಟ್, ಲಕ್ಕಿಗೇಮ್ ಹಾಗೂ 50 ವರ್ಷ ಮೇಲ್ಪಟ್ಟವರಿಗೆ ಶಾಟ್ ಪುಟ್ ಹಾಗೂ ಲಕ್ಕಿಗೇಮ್ ನಡೆಯಲಿದೆ.