ಕರ್ನಾಟಕದಲ್ಲಿ ಕನ್ನಡ ನುಡಿ ನೆಲ ಜಲದ ಪರಿಸ್ಥಿತಿ ಆತಂಕವನ್ನು ಎದುರಿಸುತ್ತಿದ್ದು ನಮ್ಮ ಸಂಸ್ಕ್ರತಿ ಮತ್ತು ಸಾಹಿತ್ಯದ ಉಳಿವಿಗಾಗಿ ಕನ್ನಡಿಗರಾದ ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಿ ನಮ್ಮತನವನ್ನು ಉಳಿಸಿಕೊಳ್ಳಬೇಕೆಂದು ಹಿರಿಯ ಸಾಹಿತಿ ಡಾ. ಪ್ರಭಾಕರ ಶಿಶಿಲ ಇವರು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಸುಳ್ಯಹಾಗು ಪಂಜ ಹೋಬಳಿ ಘಟಕ, ನೆಹರು ಮೆಮೋರಿಯಲ್ ಕಾಲೇಜು ಐಕ್ಯೂಎಸಿ ವಿಭಾಗಮತ್ತು ಕನ್ನಡ ಸಂಘ ಇದರ ಅಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ- ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗು ಕುರುಂಜಿ ಮಹಾಲಿಂಗ ಮಾಸ್ತರ್ ದತ್ತಿನಿಧಿ ಉಪನ್ಯಾಸ ನೀಡಿ ಮಾತಾನಾಡಿದರು. ಮುಖ್ಯ ಅಥಿತಿಗಳಾದ ಪ್ರಾಂಶುಪಾಲ ಡಾ. ರುದ್ರಕುಮಾರ್, ಪಿ ಯು ವಿಭಾಗ ಪ್ರಾಂಶುಪಾಲೆ ಶ್ರೀಮತಿ ಮಿಥಾಲಿ ರೈ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಭಾಧ್ಯಕ್ಷತೆಯನ್ನು ಕಸಾಪ ಅದ್ಯಕ್ಷ ಚಂದ್ರಶೇಖರ್ ಪೇರಾಲು ವಹಿಸಿದ್ದರು.ವೇದಿಕೆಯಲ್ಲಿ ವಿಧ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಶ್ರೀಮತಿ ರತ್ನಾವತಿ, ಜಿಲ್ಲಾ ಸಾಹಿತ್ಯ ಪರಿಷತ್ ಪ್ರತಿನಿಧಿ ಶ್ರೀ ರಾಮಚಂದ್ರ ಪಲ್ಲತ್ತಡ್ಕ ಮತ್ತು ಕೋಶಾಧಿಕಾರಿ ಶ್ರೀ ದಯಾನಂದ ಆಳ್ವ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಯುಕ್ತ ನಡೆಸಿದ ಸಾಹಿತ್ಯ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಹಾಗು ಪ್ರಶಸ್ತಿಪತ್ರಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಗಾಯಕರಾದ ಕೆ ಆರ್ ಗೋಪಾಲಕ್ರಷ್ಣ,ಕು. ಅಭಿಜ್ಞಾ ಮತ್ತುತಂಡ ಮತ್ತು ಕು. ಅಭಿಷೇಕ್ ಮತ್ತುತಂಡದವರು ಕನ್ನಡ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಕಾರ್ಯಕ್ರಮದಲ್ಲಿ ಅಥಿತಿಗಳನ್ನು ಪ್ರೊ. ಸಂಜೀವ ಕುದ್ಪಾಜೆ ಸ್ವಾಗತಿಸಿದರು. ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಇವರು ದನ್ಯವಾದ ಗೈದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಡಾ. ಅನುರಾಧ ಕುರುಂಜಿ ಇವರು ನಿರೂಪಿಸಿದರು.
- Tuesday
- November 5th, 2024