ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಆಚರಣೆ ನಡೆಯಿತು ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪ್ರತಿಮಾ ಹೆಬ್ಬಾರ್, ಮುಖ್ಯ ಅತಿಥಿಗಳಾಗಿ ಯಕ್ಷಗಾನ ಗುರುಗಳು ಯೋಗೀಶ್ ಶರ್ಮಾ, ಸುರೇಶ್ ಕಣೆಮರಡ್ಕ,ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಸುರೇಖಾ ಮೇಡಂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಸರ್ ಉಪಸ್ಥಿತರಿದ್ದರು, ಕನ್ನಡ ಗೀತಾ ಗಾಯನವನ್ನು ಕು!ಶ್ರದ್ಧಾ, ಮತ್ತು ಕಾವ್ಯ ಎಲ್ಲರಿಗೂ ಹೇಳಿಕೊಡುವುದರ ಮೂಲಕ ಕನ್ನಡ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು ಮಕ್ಕಳಿಗೂ ಪೋಷಕರಿಗೂ ವಿವಿಧ ಮನೋರಂಜನಾ ಆಟಗಳನ್ನು ಆಡಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಉಷಾ ಗಂಗಾದರ ಮಾವಂಜಿ ಮತ್ತು ಗೀತಾ ರವರು ವಿಜಯವಾಣಿ ಬರಹಗಾರರು ಪತ್ರಕರ್ತರು ಗಣೇಶ್ ಮಾವಂಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಚಂದ್ರಜಿತ್ ಮಾವಂಜಿ,ಭಾರತಿ ಉಗ್ರಾಣಿಮನೆ , ಅಯ್ಯಪ್ಪ ಸ್ವಾಮಿ ಭಜನಾಮಂದಿರದ ಅಧ್ಯಕ್ಷ ಪ್ರಕಾಶ್ ಕಣೆಮರಡ್ಕ, , ಯಕ್ಷಗಾನ ಮಕ್ಕಳ ಪೋಷಕರು ಉಪಸ್ಥಿತರಿದ್ದರು, ವಿಶೇಷವಾಗಿ ವೃಶಾಲಿ ಕಣೆಮರಡ್ಕ ರವರ ಜನುಮದಿನದ ಪ್ರಯುಕ್ತ ಭುವನೇಶ್ವರಿ ಮಾತೆ (ಕನ್ನಡ ಮಾತೆ) ಭಾವಚಿತ್ರವನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಲಾಯಿತು ಗೇಮ್ಸ್ ನಲ್ಲಿ ಪ್ರಖ್ಯಾತ್ ಗಣೇಶ್ ಮಾವಂಜಿ, ಮತ್ತು ಹಿರಿಯರ ವಿಭಾಗದಲ್ಲಿ ಗುರುಪ್ರಸಾದ್ ರೈ,ಸುರೇಖಾ ಮೇಡಂ, ಭವ್ಯ ಮುರಳೀ ಉಗ್ರಾಣಿಮನೆ ಸ್ವಾತಿ ಶಿವಪ್ರಸಾದ್ ಉಗ್ರಾಣಿಮನೆ, ಬಹುಮಾನ ಪಡೆದರು. ಪ್ರಕಾಶ್ ಕಣೆಮರಡ್ಕ ಲಘು ಉಪಹಾರದ ವ್ಯವಸ್ಥೆ ಹಾಗೂ ರಂಗೋಲಿ ಮತ್ತು ಆಟಕ್ಕೆ ಬೇಕಾದ ವಸ್ತುಗಳನ್ನು ಭಾರತಿ ಉಗ್ರಾಣಿಮನೆ ನೀಡಿ ಸಹಕರಿಸಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ವಾಗತಿಸಿ, ಪ್ರತೀಕ್ಷಾ ನಿರಂಜನ ಮಂಡೆಕೋಲು ವಂದಿಸಿದರು. ಸಾವಿತ್ರಿ ಕಣೆಮರಡ್ಕ ನಿರೂಪಿಸಿದರು.
- Tuesday
- November 5th, 2024