ಸುಳ್ಯದ ಕವಿ, ಸಾಹಿತಿ, ಜ್ಯೋತಿಷಿಯಾಗಿರುವ ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳ ಅವರು ಬೆಂಗಳೂರಿನ ರಾಷ್ಟ್ರೀಯ ಅಹಿಂದ ಸಂಘಟನೆಯ ರಾಷ್ಟ್ರೀಯ ಅಹಿಂದ ಕಲಾವಿದರ ಒಕ್ಕೂಟದ ದ ಕ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಗಾಯಕ, ಚಿತ್ರ ನಿರ್ದೇಶಕ,ಜ್ಯೋತಿಷಿ ಮತ್ತು ಸಂಘಟಕರಾದ ಎಚ್. ಭೀಮರಾವ್ ವಾಷ್ಠರ್ ರವರು ಸುಳ್ಯದಲ್ಲಿ 22 ವರ್ಷಗಳಿಂದ ಖಾಯಂ ನೆಲೆಸಿ ಸಂಗೀತ, ಸಾಹಿತ್ಯ, ಜ್ಯೋತಿಷ್ಯ, ಚಲನಚಿತ್ರ, ಸಂಘಟನೆ, ಕಿರುಚಿತ್ರ ಮತ್ತು ಸಮಾಜಸೇವೆಗಳ ಮೂಲಕ ಜನಮಾನಸ ಗೆದ್ದಿದ್ದಾರೆ. ರಾಷ್ಟ್ರಪ್ರಶಸ್ತಿಗಳ ಜೊತೆ 25 ಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿ ಪಡೆದಿರುವ ಇವರು ಮೂಲತಃ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನವರಾದರೂ ಸುಳ್ಯದವರಾಗಿ ಸುಳ್ಯದ ಹೆಸರನ್ನು ಇಡೀ ನಾಡಿನಲ್ಲಿ ಬೆಳಗಿಸುತ್ತಿದ್ದಾರೆ. ಇವರ ಅಪಾರ ಸಾಧನೆ ಪರಿಗಣಿಸಿ ರಾಷ್ಟ್ರೀಯ ಅಹಿಂದ ಕಲಾವಿದರ ಒಕ್ಕೂಟದ ರಾಜ್ಯಧ್ಯಕ್ಷರಾದ ಬಾಬುಲಾಲ್ ಮತ್ತು ಪ್ರಧಾನ ಕಾರ್ಯದರ್ಶಿ ನರಸಿಂಹ ಮೂರ್ತಿ ಕುಣಿಗಲ್ ಅವರು ಎಚ್. ಭೀಮರಾವ್ ವಾಷ್ಠರ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಿರುತ್ತಾರೆ.
- Tuesday
- November 5th, 2024