ಶಾಂತಿನಗರ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ನೂತನ SDMC ರಚನೆ ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾಗಿ ಮಹಮ್ಮದ್ ನಝೀರ್ ಶಾಂತಿನಗರ ಇವರನ್ನು ಪುನರಾಯ್ಕೆ ಮಾಡಲಾಯಿತು ಹಾಗೂ ಉಪಾಧ್ಯಕ್ಷರಾಗಿ ಶೀಮತಿ ಶಶಿಕಲಾ ಇವರನ್ನು ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಪ್ರಮೀಳಾ, ಜಯಂತಿ,ಶೀಲಾವತಿ, ದೇವಕಿ,ದೇವಿಪ್ರಸಾದ್, ಸಿದ್ದಿಕ್, ನೂರುದ್ದೀನ್, ಇಬ್ರಾಹಿಂ ಎಸ್ ಎ, ಸಿದ್ದೀಕ್, ಬುಶ್ರಾ, ಸೆಮಿನಾ, ಅಪ್ಸ, ವಿಶ್ವನಾಥ, ಲೋಲಾಕ್ಷಿ, ಸವಿತಾ ದಿವ್ಯ ಎಂ ಇವರುಗಳು ಆಯ್ಕೆಯಾದರು. ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಭಾರ ಮುಖ್ಯಗುರುಗಳಾದ ಶ್ರೀಮತಿ ಪವಿತ್ರ ಹಾಗೂ ಶಿಕ್ಷಕ ವೃಂದ, ಅಂಗನವಾಡಿ ಕಾರ್ಯಕರ್ತೆ ಇಂದಿರಾ ಮಂಚಿ ಹಾಗೂ ಪೋಷಕರು ಉಪಸ್ಥಿತರಿದ್ದರು.
- Tuesday
- December 3rd, 2024