ನಾಡಿನೆಲ್ಲೆಡೆ ಕತ್ತಲೆಯಿಂದ ಬೆಳಕಿನೆಡೆಗೆ ಸಾಗೋಣ ಎಂದು ಜನತೆ ಸಂದೇಶ ಸಾರಿದರೇ ಇತ್ತ ಮೆಸ್ಕಾಂ ಬೆಳಕಿನಿಂದ ಕತ್ತಲಿನಡೆಗೆ ಎಂಬ ಸಂದೇಶ ಸಾರುತ್ತಿದೆ. ದೀಪಗಳ ಹಬ್ಬವಾದ ದೀಪಾವಳಿಯನ್ನು ಸ್ವಾಗತಿಸುವ ಮೊದಲ ದಿನವೇ ಸುಳ್ಯವನ್ನು ಕತ್ತಲೆಗೆ ದೂಡಿದ ಮೆಸ್ಕಾಂ.
ದೀಪಗಳ ಹಬ್ಬವಾದ ದೀಪಾವಳಿ ಪ್ರಾರಂಭದ ದಿನವಾದ ಇಂದು ಸುಳ್ಯ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಸಂಜೆ 6:30 ರ ಬಳಿಕ ಕತ್ತಲು ಆವರಿಸಿದೆ. ಮಳೆ ಸುರಿದ ತಕ್ಷಣಕ್ಕೆ ವಿದ್ಯುತ್ ವ್ಯತ್ಯಯವಾಗುತ್ತಿದ್ದು ಜನತೆ ಗೃಹ ಜ್ಯೋತಿಯನ್ನು ಸುಳ್ಯದಲ್ಲಿ ಅಣುಕಿಸುವ ಮಟ್ಟಕ್ಕೆ ಬಂದೊದಗಿದೆ. ವಾರಕ್ಕೆ ಎರಡು ಭಾರಿ ಪವರ್ ಕಟ್ ಮಾಡುವ ಮೆಸ್ಕಾಂ ವಾರದಲ್ಲಿ 2 ಭಾರಿ ಮೈನ್ ಲೈನ್ ಸಮಸ್ಯೆ ಉಂಟಾಗುತ್ತಿದೆ. ಇಂದು ಕೂಡ ಮೈನ್ ಲೈನ್ ಫಾಲ್ಟ್ ನಿಂದ ಮಾಡಾವಿನಿಂದಲೇ ವಿದ್ಯುತ್ ಕಡಿತ ಉಂಟಾಗಿದೆ ಎಂದು ಮೆಸ್ಕಾಂ ನವರು ಹೇಳುತ್ತಿದ್ದಾರೆ.
ವಾರದಲ್ಲಿ ಎರಡು ಸಲ ಅಧಿಕೃತ ವಿದ್ಯುತ್ ಕಡಿತ ಮಾಡಿದರೆ ಎರಡು ಸಲ ಅನಧಿಕೃತವಾಗಿ ಕಡಿತವಾಗುತ್ತಿದೆ. ಒಟ್ಟಿನಲ್ಲಿ ಯಾವಾಗ ಕರೆಂಟ್ ಇರಲ್ಲಾ ಎಂಬುದರ ಬದಲು ಯಾವಾಗ ಸುಳ್ಯದಲ್ಲಿ ಕರೆಂಟ್ ಇರುತ್ತದೆ ಎಂದು ತಿಳಿಸಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.