Ad Widget

ಸುಳ್ಯ : ತಾಲೂಕು ಮಟ್ಟದ ಸೇವಾಪ್ರತಿನಿಧಿಗಳ ಅರ್ಧ ವಾರ್ಷಿಕ ಪ್ರಗತಿ ಪರಿಶೀಲನಾ ಸಭೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು ಯೋಜನಾ ವ್ಯಾಪ್ತಿಯ ಸೇವಾಪ್ರತಿನಿಧಿಗಳ ಅರ್ಧವಾರ್ಷಿಕ ಪ್ರಗತಿ ಪರಿಶೀಲನಾ ಸಭೆಯನ್ನು ಸುಳ್ಯ ಯೋಜನಾ ಕಛೇರಿಯ ಸಭಾಂಗಣದಲ್ಲಿ ನಡೆಯಿತು.
ಈ ಸಭೆಯನ್ನು ದಕ್ಷಿಣ ಕನ್ನಡ ಜಿಲ್ಲೆ 2 ರ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ರವರು ದೀಪವನ್ನು ಪ್ರಜ್ವಲಿಸಿ ಮಾತನಾಡುತ್ತ, ಸಾಧನೆಯ ಗುರಿಯಲ್ಲಿ ಅಡೆತಡೆಗಳು ಸಹಜವಾಗಿ ಬರುತ್ತಿರುತ್ತದೆ. ಆರ್ಥಿಕ ನೆರವು ನೀಡುವ ಕಾರ್ಯಕ್ರಮಗಳಲ್ಲಿ ಅನೇಕ ವಿಧದ ಸವಾಲುಗಳು ಎದುರಾಗುತ್ತಿರುತ್ತವೆ. ಇವುಗಳನ್ನೆಲ್ಲಾ ಸ್ವೀಕರಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಿದಾಗಲೇ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನವನ್ನು ಪಡೆಯಲು ಸಾಧ್ಯವೆಂದು ಹೇಳಿದರು. ತಾಲೂಕಿನ ಅರ್ಧವಾರ್ಷಿಕ ಸಾಧನೆಗಳ ಬಗ್ಗೆ ವಿಮರ್ಶೆಯನ್ನು ಮಾಡುತ್ತ, ಮುಂದಿನ ತ್ರೈಮಾಸಿಕದಲ್ಲಿ ಎಲ್ಲಾ ಸೇವಾಪ್ರತಿನಿಧಿಗಳು ಯೋಜನೆಯ ಕಾರ್ಯಕ್ರಮಗಳನ್ನು ಅನುಸ್ಥಾನವನ್ನು ಮಾಡಬೇಕು. ಯಾವುದೇ ಕಾರಣಕ್ಕೂ ಧೈರ್ಯ ಕೆಡದೆ ಉತ್ತಮವಾದ ಸಾಧನೆಗಳನ್ನು ಎಲ್ಲಾ ಕಾರ್ಯಕರ್ತರು ಮಾಡಬೇಕೆಂದು ಮಾಹಿತಿ ಮಾರ್ಗದರ್ಶನವನ್ನು ನೀಡಿದರು.
ಈ ಸಭೆಯಲ್ಲಿ ತಾಲೂಕಿನ ಯೋಜನಾಧಿಕಾರಿಯವರಾದ ಮಾಧವ ಗೌಡರವರು ಮಾತನಾಡುತ್ತ, ಸೇವಾಪ್ರತಿನಿಧಿಯವರು ದೈನಂದಿನ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ಧೈರ್ಯದಿಂದ ಮಾಡಬೇಕು. ಏನೇ ಸಮಸ್ಯೆಗಳು ಬಂದರೂ ಮೇಲಿನ ಅಧಿಕಾರಿಯವರಲ್ಲಿ ಹೇಳಿಕೊಳ್ಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಆಯಾಯ ದಿನದ ಕೆಲಸಗಳನ್ನು ಆಯಾಯ ದಿನವೇ ಮುಗಿಸಿ ಕ್ಲಪ್ತ ಸಮಯದಲ್ಲಿ ವರದಿಗಳನ್ನು ನೀಡುವ ಕೌಶಲ್ಯವನ್ನು ಎಲ್ಲಾ ಸೇವಾಪ್ರತಿನಿಧಿಯವರು ರೂಢಿಮಾಡಿಕೊಳ್ಳಬೇಕು. ಮೂರನೇ ತ್ರೈಮಾಸಿಕದಲ್ಲಿ ಯೋಜನೆಯ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಅನುಸ್ಥಾನವನ್ನು ಮಾಡಿ ಕಾರ್ಯಕ್ಷೇತ್ರಗಳಲ್ಲಿ ಉತ್ತಮವಾದ ಸಾಧನೆಯನ್ನು ಮಾಡಿಕೊಡಬೇಕೆಂದು ಮಾಹಿತಿಯನ್ನು ನೀಡಿದರು.
ಈ ಸಭೆಯಲ್ಲಿ ಜಿಲ್ಲಾ ಎಂ ಐ ಸಿ ಯೋಜನಾಧಿಕಾರಿಯವರಾದ ಶ್ರೀಮತಿ ಶಕುಂತಲಾರವರು SBI ಬ್ಯಾಂಕ್ ನ ಸಿ ಸಿ ರಿನಿವಲ್, ಸಿ ಸಿ ರಿವೈವಲ್ ನ ಬಗ್ಗೆ  CIF ಫಾರ್ಮ್ ನ ಬಗ್ಗೆ, ನವೀಕೃತ ಮರುಪಾವತಿ ಚೀಟಿಯ ಬಗ್ಗೆ, ಸಾಲ ಏಕೀಕರಣದ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಸಭೆಯಲ್ಲಿ ತಾಲೂಕು ಕಛೇರಿ ಹಣಕಾಸು ಪ್ರಬಂಧಕರಾದ ಅತೀಶ್ ರವರು, ಎಲ್ಲಾ ಮೇಲ್ವಿಚಾರಕರ ಶ್ರೇಣಿಯ ಸಿಬ್ಬಂದಿಗಳು, ಎಲ್ಲಾ ಸೇವಾಪ್ರತಿನಿಧಿಯವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಅಜ್ಜವರ ವಲಯದ ಮೇಲ್ವಿಚಾರಕರಾದ ಶ್ರೀಮತಿ ಕಾಂತಿಕಾಮಣಿರವರು ಸ್ವಾಗತಿಸಿದರು. ಅಜ್ಜವರ ವಲಯದ ಸೇವಾಪ್ರತಿನಿಧಿ ಶ್ರೀಮತಿ ಸುನೀತಾರವರು ಕಾರ್ಯನಿರೂಪಿಸಿದರು

. . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!