Ad Widget

ರೈತರ ಹಕ್ಕುಗಳ ರಕ್ಷಣೆಗಾಗಿ ಕಾನೂನು ಹೋರಾಟ ನಡೆಸಲು ಸಮಾಲೋಚನಾ ಸಭೆಯಲ್ಲಿ ನಿರ್ಧಾರ – ಸಲಹಾ ಸಮಿತಿ, ಗ್ರಾಮ ಮಟ್ಟದಲ್ಲಿ ರೈತ ಸಮಿತಿ ರಚಿಸುವ ಬಗ್ಗೆ ನಿರ್ಧಾರ ;ಬದುಕುವ ಹಕ್ಕನ್ನು ಕೇಳಲು ಹೋದರೇ ಮಾತ್ರ ಇಲ್ಲಿ ಬದುಕಲು ಸಾಧ್ಯ – ವಕೀಲ ಪ್ರದೀಪ್

ಬದುಕುವ ಹಕ್ಕನ್ನು ಕೇಳಲು ಹೋದರೇ ಮಾತ್ರ ಮಲೆನಾಡಿನ ಜೀವನ ಸಾಧ್ಯ. ನಾವು ಇಂದು ಕಸ್ತೂರಿ ರಂಗನ್ ವರದಿಯ ಹಿಂದೆ ಹೋಗುವುದನ್ನು ಬಿಟ್ಟು ನಮ್ಮ ಹಕ್ಕುಗಳ ರಕ್ಷಣೆಗಾಗಿ ಕಾನೂನು ಹೋರಾಟ ಆರಂಭಿಸಬೇಕಿದೆ ಇದರಿಂದಾಗಿ ಪಶ್ಚಿಮಘಟ್ಟಗಳ ಜ್ವಲಂತ ಸಮಸ್ಯೆಗಳಿಗೆ ಹರಿಹಾರ ಸಿಗಬಹುದು ಎಂದು ಮಲೆನಾಡು ಜಂಟಿ ಕ್ರಿಯಾ ಸಮಿತಿ ಸಂಚಾಲಕರಾಗಿರುವ ವಕೀಲ ಪ್ರದೀಪ್ ಕೆ.ಎಲ್. ಹೇಳಿದರು.

. . . . . . .

ಅವರು ಸುಳ್ಯದ ಎ.ಪಿ.ಎಂ.ಸಿ.ಯಲ್ಲಿ ಮಲೆನಾಡು ಜಂಟಿ ಕ್ರಿಯಾ ಸಮಿತಿ ಮತ್ತು ರೈತ ಹಿತಾ ರಕ್ಷಣಾ ವೇದಿಕೆ ಕೊಲ್ಲಮೊಗ್ರು-ಕಲ್ಮಕಾರು, ರೈತ ಸಂಘ ಸುಳ್ಯ ಹಾಗೂ ರೈತ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪಶ್ಚಿಮ ಘಟ್ಟಗಳ ಜ್ವಲಂತ ಸಮಸ್ಯೆ ಹಾಗೂ ಪರಿಹಾರಗಳ ಸಮಾಲೋಚನಾ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಹಿಂದೆ ಕಸ್ತೂರಿ ರಂಗನ್ ವರದಿಯ ಬಗ್ಗೆ ಕೊಲ್ಲಮೊಗ್ರದಲ್ಲಿ ಹೋರಾಟ ಆರಂಭವಾಗಿ ಸುಳ್ಯದಲ್ಲಿ ಬೃಹತ್ ಹೋರಾಟ ಆರಂಭವಾಗಿತ್ತು. ಇದರಿಂದಾಗಿ ವರದಿಯಲ್ಲಿ ಉಲ್ಲೇಖಿಸಲಾದ ಗ್ರಾಮಗಳ ಪಟ್ಟಿಯಿಂದ ಕೊಲ್ಲಮೊಗ್ರ ಕೈ ಬಿಡಲಾಗಿತ್ತು. ವರದಿಯ ವ್ಯಾಪ್ತಿಗೆ ಬರುವ ವಿಸ್ತೀರ್ಣ ಕೂಡ ಕಡಿಮೆಯಾಗಿತ್ತು. ಪರಿಸರ ಸಂರಕ್ಷಣೆಯ ಉದ್ದೇಶದಿಂದ 136 ರಾಷ್ಟ್ರಗಳ ಒಕ್ಕೂಟ (ಯುನೆಸ್ಕೋ) ಸೇರಿ ಈ ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ಆಗುತ್ತಿದೆ. ಹಿಂದಿನ ಹಾಗೂ ಈಗಿನ ಕೇಂದ್ರ ಸರಕಾರಗಳು ಯೋಜನೆ ಜಾರಿಗೆ ಹಲವು ಬಾರಿ ನೋಟಿಪಿಕೇಶನ್ ಮಾಡಿದೆ. ಕೇಂದ್ರದಲ್ಲಿ ಯಾವುದೇ ಪಕ್ಷದ ಸರಕಾರ ಬಂದರೂ ಯೋಜನೆಗೆ ತಡೆ ಮಾಡುವುದಿಲ್ಲ. ಆದ್ದರಿಂದ ನಾವೀಗ ನಮ್ಮ ಹಕ್ಕುಗಳನ್ನು ಕೇಳುವುದರ ಮೂಲಕ ಯುನೆಸ್ಕೋದ ಯೋಜನೆಗಳಿಗೆ ತಡೆ ಒಡ್ಡಬೇಕಿದೆ. ಹೋರಾಟದ ಇನ್ನೊಂದು ಯೋಜನೆ ರೂಪಿಸಿ ಜನರ ಸಹಭಾಗಿತ್ವದಲ್ಲಿ ನಮ್ಮ ಹಕ್ಕಿಗಾಗಿ ಕಾನೂನು ಸಮರ ಮಾಡುವ ಅನಿವಾರ್ಯತೆ ಇದೆ. ಗ್ರಾಮ ಮಟ್ಟದಲ್ಲಿ ರೈತ ಸಮಿತಿ ರಚಿಸಿ ಅವರಿಗೆ ಇದರ ಬಗ್ಗೆ ಅರಿವು ಮೂಡಿಸುವುದು, ಸಮಸ್ಯೆ ಬಾಧಿತ ಪ್ರದೇಶದ 41 ಶಾಸಕರು ಹಾಗೂ 11ಸಂಸದರನ್ನು ಸೇರಿಸಿಕೊಂಡು ಅವರಿಗೆ ನಮ್ಮ ಬೇಡಿಕೆಗಳನ್ನು ತಿಳಿಸಿ ಸರಕಾರದ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ .

ಪ್ರಾಸ್ತಾವಿಕ ಮಾತಗಳನ್ನಾಡಿದ ರೈತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಹಮೀದ್ ಇಡ್ನೂರು ಪ್ರಾಸ್ತಾವಿಕವಾಗಿ ಮಾತನಾಡಿ ಹಿಂದೆ ನಡೆದ ಹೋರಾಟದ ಬಗ್ಗೆ ವಿವರಿಸಿದರು. ನಾವೆಲ್ಲ ಒಗ್ಗಟ್ಟಾಗಿ ಹಕ್ಕಗಳ ರಕ್ಷಣೆಗಾಗಿ ಮಾಡುವ ಈ ಹೋರಾಟಕ್ಕೆ ಕೈಜೋಡಿಸಬೇಕಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕೃಷಿಕ ಜಾಕೆ ಮಾಧವ ಗೌಡ ಮಾತನಾಡಿ ನಾವು ಈಗ ಕಾನೂನು ಹೋರಾಟ ಮಾಡುವ ದೃಷ್ಟಿಯಿಂದ ಕಾನೂನು ಸಲಹ ಸಮಿತಿ ರಚನೆ ಮಾಡಬೇಕಿದೆ. ಇದರ ಜವಾಬ್ದಾರಿಯನ್ನು ಪ್ರದೀಪ್ ಅವರಿಗೆ ನೀಡುವ, ಜನರಿಗೆ ಬದುಕು ಹಕ್ಕುಗಳ ಕಾನೂನಿನ ಬಗ್ಗೆ, ಈ ಹೋರಾಟದ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶಕ್ಕೆ ಗ್ರಾಮ ಸಮಿತಿ ರಚನೆ, ಒಂದು ತಾಲೂಕು ಸಮಿತಿ ರಚನೆ ಮಾಡಬೇಕಿದೆ. ಎಲ್ಲರ ಸೇರಿಸಿ, ರಾಜಕೀಯ ರಹಿತವಾಗಿ ಮಾಡಬೇಕಿದೆ. ಯೋಜನೆಯಿಂದ ಭಾದಿತ ಪ್ರದೇಶಗಳ ಶಾಸಕರು ಹಾಗೂ ಸಂಸದರ ಭೇಟಿ ಮಾಡಿ ಎಲ್ಲರ ಸೇರಿಸಿ ಸಭೆ ನಡೆಸುವ ಎಂದರು.

ಹೋರಾಟ ರಾಜಕೀಯ ರಹಿತವಾಗಿ ಮಾಡಬೇಕು, ಹೋರಾಟಗಾರರು ರಾಕೀಯದ ಹಿಂದೆ ಹೋಗಬಾರದು, ಊರವರೆಲ್ಲಾ ಒಗ್ಗಟ್ಟಾಗಿರಬೇಕು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಬಗ್ಗೆ ಹೋರಾಟ ಮಾಡುತ್ತಿರುವ ವಿವಿಧ ಸಂಘಟನೆಗಳನ್ನು ಸೇರಿಸಿಕೊಂಡು ಹೋರಾಟ ಮುಂದುವರಿಸಿ , ವಿರೋಧ ಮಾಡುವ ಜನರನ್ನು ಮನವೊಲಿಸಿ ಹೋರಾಟದಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು ಎಂಬ ಸಲಹೆ ರೈತರಿಂದ ವ್ಯಕ್ತವಾಯಿತು. ಕೃಷಿಕರಾದ ಎಂ.ಡಿ.ವಿಜಯಕುಮಾರ್ ಮಡಪ್ಪಾಡಿ, ಲಕ್ಷ್ಮೀಶ ಶಿರೂರು ಕೊಲ್ಲಮೊಗ್ರ, ದಯಾನಂದ ಕಟ್ಟೆಮನೆ, ತೀರ್ಥರಾಮ ತೊಡಿಕಾನ, ಹರೀಶ್ ಪೆರಾಜೆ, ಪ್ರವೀಣ್ ಮುಂಡೋಡಿ, ಚೇತನ್ ಕಜೆಗದ್ದೆ,ಅಶೋಕ್ ಎಡಮಲೆ, ಮಾಧವ ಗೌಡ ಸುಳ್ಯಕೋಡಿ, ವಿನೂಪ್ ಮಲ್ಲಾರ,ಚಂದ್ರಶೇಖರ ಕೋನಡ್ಕ ಮತ್ತಿತರರು ಅಭಿಪ್ರಾಯ ಮಂಡಿಸಿದರು.

ಕೃಷಿಕರ ಅಭಿಪ್ರಾಯದಂತೆ ಸಭೆಯಲ್ಲಿ ವಿವಿಧ ಸಲಹಾ ಸಮಿತಿ ರಚಿಸುವ ಬಗ್ಗೆ , ಗ್ರಾಮ ಮಟ್ಟದಲ್ಲಿ ರೈತ ಸಮಿತಿ ರಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ವೇದಿಕೆಯಲ್ಲಿ ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು, ಪ್ರಗತಿ ಪರ ಕೃಷಿಕರಾದ ಗದಾಧರ ಮಲ್ಲಾರ ಉಪಸ್ಥಿತರಿದ್ದರು.

ಹಮೀದ್ ಇಡ್ನೂರು ಸ್ವಾಗತಿಸಿ, ವಕೀಲರಾದ ಬಾಲಸುಬ್ರಹ್ಮಣ್ಯ ಕಟ್ಟ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಚಂದ್ರಶೇಖರ ಕೋನಡ್ಕ ಪ್ರಾರ್ಥಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!