ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು ಇದರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸಭೆಯನ್ನು ತಾಲೂಕು ಭಜನಾ ಪರಿಷತ್ ನ ಅಧ್ಯಕ್ಷರಾದ ಯತೀಶ್ ರೈ ದುಗಲಡ್ಕರವರ ಅಧ್ಯಕ್ಷತೆಯಲ್ಲಿ ಸುಳ್ಯ ಯೋಜನಾ ಕಛೇರಿಯ ಸಭಾಂಗಣದಲ್ಲಿ ನಡೆಯಿತು.
ಈ ಸಭೆಯನ್ನು ತಾಲೂಕು ಭಜನಾ ಪರಿಷತ್ ನ ಅಧ್ಯಕ್ಷರಾದ ಯತೀಶ್ ರೈ ದುಗಲಡ್ಕರವರು ದೀಪ ಪ್ರಜ್ವಲಿಸುವ ಮುಖೇನ ಚಾಲನೆಯನ್ನು ನೀಡಿದರು.
ಈ ಸಭೆಯಲ್ಲಿ ತಾಲೂಕು ಯೋಜನಾಧಿಕಾರಿಯವರಾದ ಮಾಧವ ಗೌಡರವರು ಅರ್ಧ ವಾರ್ಷಿಕದಲ್ಲಿ ನಡೆಸಿದ ಭಜನಾ ಪರಿಷತ್ ಕಾರ್ಯಕ್ರಮಗಳ ಸಾಧನೆಗಳ ಬಗ್ಗೆ ವರದಿಯನ್ನು ಮಂಡನೆ ಮಾಡುತ್ತ, ಈ ವರ್ಷದಲ್ಲಿ ತಾಲೂಕಿನ ಮೂರು ಕಡೆಗಳಲ್ಲಿ ಭಜನಾ ಪರಿಷತ್ ವತಿಯಿಂದ ಬಹಳ ಉತ್ತಮ ರೀತಿಯಲ್ಲಿ ಮಕ್ಕಳಿಗೆ ಭಜನಾ ತರಬೇತಿ ಕಾರ್ಯಕ್ರಮವನ್ನು ನಡೆಸಲಾಗಿದೆ. ಮಕ್ಕಳಿಗೆ ಭಜನಾ ತರಬೇತಿಯನ್ನು ನಡೆಸಿದ ಸಂಘಟಕರಿಗೆ ಅಭಿನಂದನೆಯನ್ನು ಹೇಳಿದರು. ಮಕ್ಕಳಿಗೆ ಭಜನೆಯ ಬಗ್ಗೆ ತರಬೇತಿಯನ್ನು ಮಾಡಿ, ಮುಂದಕ್ಕೆ ಆ ಮಕ್ಕಳು ಪ್ರತಿ ನಿತ್ಯ ಭಜನೆಯಲ್ಲಿ ಭಾಗಿಯಾಗುವಂತೆ ಮಕ್ಕಳ ಪೋಷಕರಿಗೆ ಪ್ರೇರಣೆಯನ್ನು ನೀಡಬೇಕು. ಮುಂದಿನ ಬೇಸಿಗೆಯಲ್ಲಿ ಪ್ರತಿ ವಲಯಗಳಲ್ಲಿ ಮಕ್ಕಳ ಭಜನಾ ತರಬೇತಿಗಳನ್ನು ಹಮ್ಮಿಕೊಳ್ಳಬೇಕು. ವಲಯಗಳಲ್ಲಿ ವಲಯ ಭಜನಾ ಪರಿಷತ್ ಸಮಿತಿಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ದಿನಾಂಕ 17-11-2024 ರಂದು ಸಂಪಾಜೆ ವಲಯದ ಆರಂತೋಡಿನಲ್ಲಿ ನಡೆಯುವ ತಾಲೂಕು ಮಟ್ಟದ ಭಜನೋತ್ಸವ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಭಜನಾ ಮಂಡಳಿಗಳ ಭಾಜಕರು ಭಾಗವಹಿಸುವಂತೆ ಭಜನಾ ಪರಿಷತ್ ನ ಪದಾಧಿಕಾರಿಗಳು ಪ್ರೇರಣೆಯನ್ನು ನೀಡಬೇಕು ಎಂದು ಮಾಹಿತಿ ಮಾರ್ಗದರ್ಶನವನ್ನು ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಭಜನಾ ಪರಿಷತ್ ನ ಗೌರವ ಅಧ್ಯಕ್ಷರಾದ ಶಿವಪ್ರಸಾದ್ ಅಲೆಟ್ಟಿ, ಕಾರ್ಯದರ್ಶಿರವರಾದ ಸತೀಶ್ ಟಿ ಎನ್, ಕೋಶಾಧಿಕಾರಿಯವರಾದ ಮಹೇಶ್ ನೆಕ್ರಾಜೆ, ತಾಲೂಕು ಭಜನಾ ಪರಿಷತ್ ನ ನಿರ್ದೇಶಕರುಗಳು, ಪ್ರತಿ ವಲಯಗಳ ಭಜನಾ ಪರಿಷತ್ ನ ವಲಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಈ ಸಭೆಯಲ್ಲಿ ವಲಯ ಭಜನಾ ಪರಿಷತ್ ನ ಪದಾಧಿಕಾರಿಗಳು, ಭಜನಾ ಮಂಡಳಿಗಳ ಪದಾಧಿಕಾರಿಗಳು, ಸದಸ್ಯರು, ಎಲ್ಲಾ ಮೇಲ್ವಿಚಾರಕರುಗಳು ಭಾಗವಹಿಸಿದರು.
ಈ ಸಂದರ್ಭದಲ್ಲಿ ಗುತ್ತಿಗಾರು ವಲಯದ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ಸ್ವಾಗತಿಸಿದರು. ಸುಬ್ರಹ್ಮಣ್ಯ ವಲಯದ ಮೇಲ್ವಿಚಾರಕರಾದ ಕೃಷ್ಣಪ್ಪ ಕುಲಾಲ್ ಕಾರ್ಯನಿರೂಪಿಸಿದರು. ಸುಳ್ಯ ವಲಯದ ಮೇಲ್ವಿಚಾರಕರಾದ ಶ್ರೀಮತಿ ಜಯಶ್ರೀ ಧನ್ಯವಾದವಿತ್ತರು.
- Friday
- November 1st, 2024