ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದ ಪೂರ್ವ ದಿಕ್ಕಿನಲ್ಲಿರುವ ಸಿದ್ಧಪರ್ವತದಿಂದ ಕೋಟಿ ತೀರ್ಥ ನದಿಯು ಹರಿಯುತ್ತಿದ್ದು, ಅದು ಶ್ರೀ ದೇವಳದ ಎದುರು ಭಾಗದಲ್ಲಿ ಸಂಗಮವಾಗಿ “ಅಘನಾಶಿನಿ” ಯಾಗಿ ಮುಂದಕ್ಕೆ ಹರಿಯುತ್ತದೆ. ಇಲ್ಲಿ ತುಲಾ ಸಂಕ್ರಮಣ ಅ.17 ರಂದು ಬೆಳಿಗ್ಗೆ 7:40ರ ಶುಭ ಮುಹೂರ್ತದಲ್ಲಿ ತೀರ್ಥೋದ್ಭವವಾಗಿದ್ದು, ದೇವಳದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್ ರವರು ನದಿಗೆ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಿದರು. ನಂತರ ಭಕ್ತಾದಿಗಳಿಂದ ತೀರ್ಥಸ್ನಾನ ನೆರವೇರಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)
- Sunday
- November 24th, 2024