ಬಿಜೆಪಿ ಮುಖಂಡ ಸಂಪಾಜೆಯ ಬಾಲಚಂದ್ರ ಕಳಗಿ ಕೊಲೆ ಪ್ರಕರಣದ ತೀರ್ಪು ನಿನ್ನೆ ಪ್ತಕಟವಾಗಿದ್ದು, ಆರೋಪಿಗಳ ಮೇಲಿನ ಆರೋಪ ಸಾಬೀತಾಗಿರುವುದಾಗಿ ನ್ಯಾಯಾಲಯವು ಆದೇಶಿಸಿದೆ.
ಕಳಗಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ಹರಿಪ್ರಸಾದ್ ಪಿ ಕೆ ಯಾನೆ ಮಣಿ ಹಾಗೂ ಜಯನ್ ಕೆ ಇವರನ್ನು ನ್ಯಾಯಾಲಯವು ತಪ್ಪಿತಸ್ಥರು ಎಂದು ಹೇಳಿದ್ದು, ಶಿಕ್ಷೆಯ ಪ್ರಮಾಣವನ್ನು ದಿನಾಂಕ 19-10-2024 ರಂದು ನ್ಯಾಯಾಲಯ ಪ್ರಕಟಿಸಲಿದೆ ಎಂದು ತಿಳಿದು ಬಂದಿದೆ.