ಮಲೆನಾಡು ಜನ ಹಿತ ರಕ್ಷಣವೇದಿಕೆಯ ಇದರ ವತಿಯಿಂದ ಸುಳ್ಯ ತಾಲೂಕು ಕಚೇರಿ ಬಳಿ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಸಭೆ ನಡೆಸಿ ರೈತರು ಬಳಿಕ ವರದಿ ಜಾರಿ ಆಗದಂತೆ ತಹಶೀಲ್ದಾರ್ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮಲೆನಾಡು ಜನಹಿತ ವೇದಿಕೆಯ ಸಂಚಾಲಕರಾದ ಕಿಶೋರ್ ಶಿರಾಡಿ ಮಾತನಾಡಿ ಕಸ್ತೂರಿ ರಂಗನ್ ವರದಿ ಜಾರಿ ಯಿಂದ ಆಗುವ ತೊಂದರೆ ಬಗ್ಗೆ ವಿವರಿಸಿದರು. ಅಲ್ಲದೆ ಈ ಕಾಯಿದೆ ಜಾರಿಯಿಂದ ಹಲವು ಸಮಸ್ಯೆಗಳನ್ನು ಜನರು ಎದುರಿಸಬೇಕಾಗಿ ಬರುತ್ತದೆ ಎಂದರು. ಸಂದರ್ಭದಲ್ಲಿ ಕರುಣಾಕರ ಎ ಜಿ ಪುಷ್ಪ ಮೆದಪ್ಪ ಸತೀಶ್ ನಾಯ್ಕ ಅರಂತೋಡು ಚಂದ್ರಶೇಖರ ಬಾಳೆಕಜೆ ವೆಂಕಟ್
ಈ ಸಂದರ್ಭದಲ್ಲಿ ಕರುಣಾಕರ ಎ ಜಿ, ಪುಷ್ಪ ಮೇದಪ್ಪ, ಸತೀಶ್ ನಾಯ್ಕ ಅರಂತೋಡು, ಚಂದ್ರಶೇಖರ ಬಾಳೆಕಜೆ, ವೆಂಕಟ್ರಮಣ ಪೆತ್ತಾಜೆ, ಸಂತೋಷ್ ಕುತ್ತಮೊಟ್ಟೆ, ಪ್ರಸನ್ನ ಅಜ್ಜನಗದ್ದೆ. ರಾಜರಾಂ ಕೆ ಕೆ., ಆನಂದ ಅಜ್ಜನಗದ್ದೆ, ಸತೀಶ್ ಕೆರೆಕೋಡಿ ಹರೀಶ್ ಬಳ್ಳಡ್ಕ , ಚಂದ್ರಶೇಖರ ಕೊಂದಾಳ, ಹೇಮಂತ್ ದೋಲನ, ಚಂದ್ರಣ್ಣ ಬಾಳುಗೋಡು ಅಲ್ಲದೆ ಮತ್ತಿತರರು ಭಾಗವಹಿಸಿದ್ದರು.