
ಸುಳ್ಯ ಮಹಿಳಾ ದಸರಾದ ಅಂಗವಾಗಿ ಮಹಿಳೆಯರಿಗೆ ನೀಡಿರುವ ಸ್ಟಾಲ್ ಗಳಲ್ಲಿ ಕೆಲವೊಂದು ಗೃಹ ಸಲಕರಣೆಗಳು, ಬಟ್ಟೆ ಹಾಗೂ ಇನ್ನಿತರ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಇಲ್ಲಿ ಅಜ್ಜಾವರದ ಚೈತ್ರ ಯುವತಿ ಮಂಡಲದ ವತಿಯಿಂದ 10 ನೇ ಕೌಂಟರ್ ನಲ್ಲಿ ತೆರೆಯಲಾದ ಸ್ಟಾಲ್ ನಲ್ಲಿ ಹಳ್ಳಿಯ ಮತ್ತು ಪಾರಂಪರಿಕ ಆಹಾರ ಸಾಮಾಗ್ರಿ ಮತ್ತು ಪರಿಸರ ಸ್ನೇಹಿ ವಸ್ತುಗಳ ಮಾರಾಟ ನಡೆಯಿತು. ಇದರಲ್ಲಿ ಬಹು ಮುಖ್ಯವಾಗಿ ಆಹಾರ ಸಾಮಾಗ್ರಿಗಳೇ ಹೆಚ್ಚಾಗಿದ್ದು ಸ್ಟಾಲ್ ಮುಂಭಾಗದಲ್ಲಿ ಜನಸಂದಣಿಯೇ ಸೇರಿ ಖರೀದಿಸುವ ದೃಶ್ಯಗಳು ಕಂಡವು.


