ಅರಂಬೂರು ಶ್ರೀ ವಯನಾಟ್ ಕುಲವನ್ ಧೈವಸ್ಥಾನದಲ್ಲಿ 2025 ಮಾರ್ಚ್ 15ರಿಂದ 18ರ ವರೆಗೆ ನಡೆಯುವ ಧೈವಂಕಟ್ಟು ಮಹೋತ್ಸವದ ವಿವಿಧ ಉಪ ಸಮಿತಿಗಳ ರಚನೆ ಮಹೋತ್ಸವ ಸಮಿತಿ ಅಧ್ಯಕ್ಷರಾದ ಪಿ. ಬಿ ಸುಧಾಕರ್ ರೈ ಪೆರಾಜೆ ಇವರ ಅಧ್ಯಕ್ಷತೆ ಯಲ್ಲಿ ಅರಂಬೂರು ಧೈವಸ್ಥಾನದಲ್ಲಿ ಅ.06 ರಂದು ನಡೆಯಿತು.
ಸಭೆಯಲ್ಲಿ ಕುಟುಂಬದ ಯಜಮಾನ ಕುಂಞಿಕಣ್ಣ ಅರಂಬೂರು ಆಡಳಿತ ಸಮಿತಿ ಅಧ್ಯಕ್ಷರಾದ ನಾರಾಯಣ ಬಾರ್ಪಣೆ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪವಿತ್ರನ್ ಗುಂಡ್ಯ, ಕೋಶಾಧಿಕಾರಿ ಜತ್ತಪ್ಪ ರೈ ಅರಂಬೂರು, ಕಾರ್ಯಧ್ಯಕ್ಷರುಗಳಾದ ಕುಂಞಿರಾಮ ಶ್ರೀ ಶೈಲಮ್, ಕೃಷ್ಣಪ್ಪ ಕೆದಂಬಾಡಿ,ಪದ್ಮಯ್ಯ ಪಡ್ಪು, ಹಿರಿಯ ರಾದ ಕೊರಗಪ್ಪ ಮಾಸ್ಟರ್ ಕಾಣಕ್ಕೂರು, ಶ್ರೀಪತಿ ಬಟ್ ಮಜಿಗುಂಡಿ ಇದ್ದರು. ಸ್ಥಳೀಯರಾದ ಎನ್.ಎ. ಗಂಗಾಧರ, ವಸಂತ ಪಡ್ಪು, ಜಯಶಂಕರ ಪಡ್ಪು, ಧನಂಜಯ ಅರಂಬೂರು, ಸುನೀಲ್ ಅರಂಬೂರು, ಸುರೇಶ ಪರಿವಾರಕಾನ, ಸುನೀಲ್ ಪರಿವಾರಕಾನ, ಅನಿಲ್ ಪರಿವರಕಾನ,ಪ್ರಮೋದ್ ಕೂಟೇಲು, ಅಮ್ಮು ರೈ ಅರಂಬೂರು, ಅಶೋಕ್ ಪೀಚೆ ನಾರಾಯಣ ರೈ ಅರಂಬೂರು, ನಾಗೇಶ್ ಸುಳ್ಯ,ಅಮಿತಾ ರೈ, ಯಮಲಾಕ್ಷಿ ಅರಂಬೂರು, ರಾಜೀವಿ ಪಾಲಡ್ಕ ಅಂಬಿಕಾ ಶ್ರೀಶೈಲಮ್, ಶಾಲಿನಿ ಪರಿವಾರಕಾನ,ಶೋಭಾ ರೈ ಅರಂಬೂರು, ಪುರುಷೋತ್ತಮ ಪಡ್ಪು, ಕುತ್ತಿಕೋಲ್ ತಂಬೂರಾಟ್ಟಿ ಸೇವಾ ಸಮಿತಿ ಆಲೆಟ್ಟಿ, ಸುಳ್ಯ, ಅರಂತೋಡು ಇದರ ಸದಸ್ಯರು, ಕುಟುಂಬಸ್ಥರು ಹಾಗು ಊರಿನ ಭಗವಾದ್ಭಕ್ತರು ಉಪಸ್ಥಿತರಿದ್ಸರು. ಪವಿತ್ರನ್ ಗುಂಡ್ಯ ಸ್ವಾಗತಿಸಿ ಸ್ಥಾನದ ಮನೆಯ ದಿವೀಶ್ ವಂದಿಸಿದರು.