Ad Widget

ಹರಿಹರಪಲ್ಲತ್ತಡ್ಕ : ಭಜನಾ ತರಬೇತಿ ಸಮಾರೋಪ  ಮತ್ತು ಮಂಗಳೋತ್ಸವ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸುಳ್ಯ ತಾಲೂಕು, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಬ್ರಮಣ್ಯ ವಲಯ ಹರಿಹರೇಶ್ವರ ದೇವಸ್ಥಾನ ಹರಿಹರ ಪಲ್ಲತಡ್ಕ ಇವರ ಸಂಯುಕ್ತ ಆಶ್ರಯದಲ್ಲಿ ಹರಿಹರೇಶ್ವರ ದೇವಸ್ಥಾನದ ಸಭಾಭವನದಲ್ಲಿ ಭಜನಾ ತರಬೇತಿಯ ಸಮಾರೋಪ ಸಮಾರಂಭ ಮತ್ತು ಮಂಗಳೋತ್ಸವ ಕಾರ್ಯಕ್ರಮ ಅ.07 ರಂದು ನಡೆಯಿತು. ಅ. 3ರಿಂದ 7 ರ ತನಕ 84 ಮಕ್ಕಳಿಗೆ ಭಜನಾ ತರಬೇತಿ ಮತ್ತು ಸಂಸ್ಕೃತಿ ಮತ್ತು ಸಂಸ್ಕಾರಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯತೀಶ್ ರೈ ದುಗಲಡ್ಕ ಅಧ್ಯಕ್ಷರು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತು ಸುಳ್ಯ ತಾಲೂಕು ವಹಿಸಿದರು. ಮುಖ್ಯ ಅತಿಥಿಗಳಾದ ಶ್ರೀ ಕಿಶೋರ್ ಕುಮಾರ್ ಕೂಜುಗೋಡು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಹರಿಹರೇಶ್ವರ ದೇವಸ್ಥಾನ ಭಜನೆಯಲ್ಲಿ ಮೇಲು ಕೀಳು ಎಂಬ ಭಾವನೆ ಇಲ್ಲ ಬಡವ ಶ್ರೀಮಂತನೆಂಬ ತಾರತಮ್ಯ ಇಲ್ಲ ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಇದ್ದಾಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದು ಕರೆ ಕೊಟ್ಟರು. ಶ್ರೀ ಮಾಧವ ಗೌಡ, ಯೋಜನಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸುಳ್ಯ ತಾಲೂಕು ಇವರು ಮಾತಾಡಿ ಪ್ರತಿ ಮನೆಯಲ್ಲೂ ಭಜನೆ ನಡೆದಾಗ ದೇವರಲ್ಲಿ ಭಕ್ತಿ ಮತ್ತು ಗುರುಹಿರಿಯರಲ್ಲಿ ಗೌರವ ಆ ಮನೆಯಲ್ಲಿ ತುಂಬುವುದು. ಪ್ರತಿ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಈ ರೀತಿ ಜ್ಞಾನಭೋದಿಸುವ ಕೇಂದ್ರಗಳಾಗಲಿ ಎಂದು ನುಡಿದರು. ಮಂಜುನಾಥೇಶ್ವರ ಭಜನಾ ಪರಿಷತ್ತಿನ ಕಾರ್ಯದರ್ಶಿಯರಾದ ಸತೀಶ್ ಟಿ ಎನ್ ಪ್ರಾಸ್ತಾವಿಕವಾಗಿ ಮಾತನಾಡಿ ಐದು ದಿವಸದಲ್ಲಿ ಮಕ್ಕಳಿಗೆ ನೀಡಿದ ತರಬೇತಿಯ ಬಗ್ಗೆ ವಿವರಿಸಿದ್ದರು. ಶ್ರೀ ತೀರ್ಥರಾಮ ಧೋನಿಪಲ್ಲ ಅಧ್ಯಕ್ಷರು ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಸುಬ್ರಮಣ್ಯ ವಲಯ ಇವರು ಕಾರ್ಯಕ್ರಮಕ್ಕೆ ಶುಭ ನುಡಿದರು ಕಾರ್ಯಕ್ರಮದ ವೇದಿಕೆಯಲ್ಲಿ  ಹೇಮಂತ್ ಅಧ್ಯಕ್ಷರು ಕೊಲ್ಲಮೊಗರು ಬಿ ಒಕ್ಕೂಟ,  ನಾಗೇಶ್ ಅಧ್ಯಕ್ಷರು ಬಾಳಗೋಡು ಒಕ್ಕೂಟ, ಶ್ರೀ ಶೇಷಪ್ಪ ಕೊಪ್ಪಡ್ಕ ಅಧ್ಯಕ್ಷರು ಕಲ್ಮಕರು ಒಕ್ಕೂಟ, ರಾಮಣ್ಣ ಅಧ್ಯಕ್ಷರು ಕಲ್ಮಕಾರ್ ಬಿ ಒಕ್ಕೂಟ,  ಹರ್ಷ ಗೌಡ ಅಧ್ಯಕ್ಷರು ಹರಿಹರ ಪಲ್ಲದ ಒಕ್ಕೂಟ, ಶ್ರೀಮತಿ ಮೀನಾಕ್ಷಿ ಕಲ್ಲೇರಿ ಅಧ್ಯಕ್ಷರು ಐನೇಕಿದು ಒಕ್ಕೂಟ, ಹರಿಪ್ರಸಾದ್ ಅಧ್ಯಕ್ಷರು ಕುಲ್ಕುಂದ ಒಕ್ಕೂಟ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಶ್ರೀಮತಿ ನಾಗವೇಣಿ ಸೇವಾ ಪ್ರತಿನಿಧಿ ನೀಡಿದರು ಧನ್ಯವಾದಗಳು ವಲಯ ಭಜನಾ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಶ್ರೀದೇವಿಯವರು ನೀಡಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಕೃಷ್ಣಪ್ಪ ಎಂ ಮೇಲ್ವಿಚಾರಕರು ಮಾಡಿದರು. ಪ್ರಥಮದಲ್ಲಿ ಹರಿಹರ ಪಲ್ಲತಡ್ಕ ಪೇಟೆಯಿಂದ ಕುಣಿತ ಭಜನೆ ಮೆರವಣಿಯೊಂದಿಗೆ ಆಗಮಿಸಿ, ಮಂಗಳೋತ್ಸವ ಕಾರ್ಯಕ್ರಮವನ್ನು ನಿರ್ವಹಿಸಲಾಯಿತು.

. . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!