ಸುಳ್ಯದ ರಂಗಮನೆಯ ಕಲಾಕೇಂದ್ರದ ಪ್ರಮುಖ ಆಕರ್ಷಣೀಯ ಕೇಂದ್ರವಾಗಿದ್ದ ಹಿರಿಯ ಯಕ್ಷಗಾನ ಕಲಾವಿದ ಬಣ್ಣದ ಮಾಲಿಂಗರ ಸವಿ-ನೆನಪಿಗೆ ರಚಿಸಿದ್ದ ಬೃಹತ್ ಮೂರ್ತಿಯು ಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ದರೇಶಾಯಿಯಾಗಿತ್ತು. ಇದೀಗ ಇನ್ನಷ್ಟು ಬಲಿಷ್ಠವಾಗಿ ಮತ್ತು ಅತ್ಯಾಕರ್ಷಕವಾಗಿ ರೂಪುಗೊಂಡಿದ್ದು ಇಂದು ಗೌರವಾನ್ವಿತ ಶ್ರೀಯುತ ಮೋಹನ್ ಆಳ್ವ ಇವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡಿತು.
ಸಮಾರಂಭದ ವೇದಿಕೆಯಲ್ಲಿ ರಂಗಮನೆ ಕಲಾ ಕೇಂದ್ರದ ಜೀವನ್ ರಾಂ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಮೂಡಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆ ಪ್ರತಿಷ್ಠಾನ ಇದರ ಅಧ್ಯಕ್ಷ ಡಾ.ಮೋಹನ್ ಆಳ್ವ,ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ,ಚಲನಚಿತ್ರ ನಟ ಕಲಾವಿದ ರಂಗ ಕರ್ಮಿ ಅರುಣ್ ಸಾಗರ್,ಮಾತನಾಡಿ ಶುಭ ಹಾರೈಸಿದರು. ಸುಜನ ಸುಳ್ಯ ಉಪಸ್ಥಿತರಿದ್ದರು, ‘ವನಜ ರಂಗಮನೆ’ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಇವರಿಗೆ ಪ್ರದಾನ ಮಾಡಲಾಯಿತು.
ಶಿಕ್ಷಕರಾದ ಅಚುತ್ತ ಮಾಸ್ತರ್ ಅಟ್ಲೂರ್ ಕಾರ್ಯಕ್ರಮ ನಿರೂಪಿಸಿದರು ಸುರಿಯುತ್ತಿರುವ ಜಡಿ ಮಳೆಗೆ ಕೂಡ ಕಿಕ್ಕಿರಿದು ಸೇರಿದ ಬೃಹತ್ ಜನಸ್ತೋಮ ರಂಗಮನೆಯ ಈ ದಿನದ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.