ಮೂಡಿ ಬರಲಿದೆ ಸಮಾನ ಮನಸ್ಕ ಜೋಡಿಗಳಾದ ಡಾ. ಅನುರಾಧಾ ಕುರುಂಜಿ ಮತ್ತು ಚಂದ್ರಶೇಖರ ಬಿಳಿನೆಲೆ ದಂಪತಿಗಳ ಮನದ ಮಾತು
ಸುಳ್ಯದ ವ್ಯಕ್ತಿತ್ವ ವಿಕಸನ ತರಬೇತುದಾರರುಗಳಾದ ಡಾ. ಅನುರಾಧಾ ಕುರುಂಜಿ ಮತ್ತು ಚಂದ್ರಶೇಖರ ಬಿಳಿನೆಲೆ ದಂಪತಿಗಳು ದ. ಕ ಮತ್ತು ಉಡುಪಿಯ ಪ್ರಸಿದ್ಧ ಟಿವಿ ಚಾನೆಲ್ ದಾಯ್ಜಿ ವರ್ಲ್ಡ್ ನ “ಈ ಬಂಧನ”ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ಈರ್ವರು ಹಲವು ವರ್ಷಗಳಿಂದ ಅಧ್ಯಾಪನ ವೃತ್ತಿಯಲ್ಲಿ ತೊಡಗಿಸಿಕೊಂಡು ಸಾವಿರಾರು ವಿದ್ಯಾರ್ಥಿ ವೃಂದಕ್ಕೆ ವಿದ್ಯಾರ್ಜನೆ ಮಾಡಿಸುವುದರ ಜೊತೆಗೆ ತರಬೇತುದಾರರಾಗಿ 2500ಕ್ಕೂ ಮಿಕ್ಕಿ ತರಬೇತಿಗಳನ್ನು ನೀಡಿ ಲಕ್ಷಾಂತರ ಜನರಿಗೆ ಜ್ಞಾನವನ್ನು ಪಸರಿಸುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು, ಎನ್ಎಸ್ಎಸ್ ನಲ್ಲಿ ದಾಖಲೆಯ ಸಾಧನೆಯನ್ನು ಮಾಡಿ, ರೆಡ್ ಕ್ರಾಸ್ ನಲ್ಲಿ ಸೈ ಎನಿಸಿಕೊಂಡು, ಸಂಘಟನಾ ಕ್ಷೇತ್ರದಲ್ಲಿ ಜೊತೆಜೊತೆಯಾಗಿ ಹೆಜ್ಜೆ ಇಟ್ಟು, ಹಲವು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು, ಭಾಷಣಕಾರರಾಗಿ ಜನರ ಮನೆ ಮಾತಾಗಿ, ನಿರೂಪಕರಾಗಿ ಜೊತೆಯಾಗಿ ವೇದಿಕೆ ಹಂಚಿಕೊಂಡು ಜಿಲ್ಲೆ, ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡು, ಸಾಹಿತ್ಯ ರಚನೆ ಹಾಗೂ ಪುಸ್ತಕಗಳ ಪ್ರಕಟಣೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲೂ ತೊಡಗಿಸಿಕೊಂಡು, ಸಲಹೆ ಪಡೆಯುವ ಯುವ ಸಮೂಹಕ್ಕೆ ಉತ್ತಮ ಮಾರ್ಗದರ್ಶಕರಾಗಿ, ಹಿಡಿದ ಕಾರ್ಯಗಳನ್ನು ಛಲದಿಂದ, ಅಚ್ಚುತಟ್ಟಾಗಿ ನಿರ್ವಹಿಸುವ ಜೋಡಿಗಳಾಗಿ …. ಹೀಗೆ ಹಲವು ಕ್ಷೇತ್ರಗಳಲ್ಲಿ ಪ್ರತಿ ಕಾರ್ಯದಲ್ಲೂ , ಚರ್ಚಿಸಿ, ಜೊತೆಯಾಗಿ ಹೆಜ್ಜೆ ಇಟ್ಟು ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿ ಸಾರ್ಥಕ ಬದುಕನ್ನು ಕಟ್ಟಿಕೊಂಡಿರುವ ಸಮಾನ ಮನಸ್ಕ ಸಾಧಕ ಜೋಡಿಗಳು ಡಾ. ಅನುರಾಧಾ ಕುರುಂಜಿ ಮತ್ತು ಚಂದ್ರಶೇಖರ ಬಿಳಿನೆಲೆ ದಂಪತಿಗಳು. ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಅನುರಾಧಾ ಕುರುಂಜಿ ಮತ್ತು ಕೆವಿಜಿ ಪಾಲಿಟೆಕ್ನಿಕ್ ನ ಅಟೋ ಮೊಬೈಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಶಿಕ್ಷಕರಾಗಿರುವ ಚಂದ್ರಶೇಖರ ಬಿಳಿನೆಲೆಯವರನ್ನು ಉಡುಪಿಯ ದಾಯ್ಜಿ ವರ್ಲ್ಡ್ ಸ್ಟುಡಿಯೋದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಿರೂಪಕರಾದ ಆಲ್ವಿನ್ ದಾಂತಿಯವರು ಸಂದರ್ಶನ
ನಡೆಸಿದ್ದಾರೆ.