ಸುಳ್ಯದಲ್ಲಿ ಪ್ಲೇ ಸ್ಕೂಲ್ ಆರಂಭಿಸಿ ಮಕ್ಕಳ ಲಾಲನೆ ಪಾಲನೆ ಮಾಡಿಕೊಂಡು ಅವರ ಬೆಳವಣಿಗೆಯ ಜೊತೆಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಸಮಾಜಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬರುತ್ತಿದ್ದು ಕಳೆದ ನಾಲ್ಕು ವರ್ಷಗಳಿಂದ ಅಂಜಲಿ ಮೊಂಟೆಸ್ಸರಿ ಶಾಲೆಯು ಬೊಂಬೆ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿದೆ. ಮೈಸೂರು ಭಾಗದಲ್ಲಿ ಈ ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯದ ಕುರಿತು ಸುಳ್ಯದಲ್ಲಿಯೂ ಆಚರಣೆ ಮೂಲಕ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತಿದ್ದು ಮೊಟ್ಟ ಮೊದಲ ಬಾರಿಗೆ ಈ ರೀತಿಯ ಒಂದು ಕೆಲಸಗಳನ್ನು ಮಾಡುತ್ತಿರುವುದನ್ನು ಗಮನಿಸಿ ಸುಳ್ಯ ತಾಲೂಕು ಗೌಡ ಮಹಿಳ ಘಟಕದ ವತಿಯಿಂದ ಅಂಜಲಿ ಮೊಂಟೆಸ್ಸರಿ ಶಾಲೆಯ ಸಂಚಾಲಕರನ್ನು ಸನ್ಮಾನಿಸಲಾಯಿತು.
ಅಂಜಲಿ ಮೊಂಟೆಸ್ಸಿರಿ ಶಾಲೆಯ ಸಂಚಾಲಕಿ ಗೀತಾಂಜಲಿ ಟಿ.ಜಿ. ಅವರನ್ನು ಗೌಡ ಮಹಿಳಾ ಘಟಕದ ವತಿಯಿಂದ ನವರಾತ್ರಿಯ ಎರಡನೇ ದಿನವಾದ ಅ.04 ರಂದು ಗೌಡ ಯುವ ಸೇವಾ ಸಂಘದ ಅಧ್ಯಕ್ಷರಾದ ಪಿ ಎಸ್ ಗಂಗಾಧರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು. ಮಹಿಳಾ ಘಟಕದ ಅಧ್ಯಕ್ಷರಾದ ವಿನುತ ಪಾತಿಕಲ್ಲು , ಕೋಶಾಧಿಕಾರಿ ಜಯಶ್ರೀ ರಾಮಚಂದ್ರ ಪಳ್ಳತ್ತಡ್ಕ , ಉಪಾಧ್ಯಕ್ಷರಾದ ಮೀನಾಕ್ಷಿ ನಿರ್ದೇಶಕರಾದ ಪುಷ್ಪಾವತಿ ದೇವರಗುಂಡ , ಭಾರತಿ ಉಳುವಾರು ,ವಸಂತಿ ಉಗ್ರಾಣಿ ಮನೆ, ವನಿತ ಮಂಡೆಕೋಲು ಬೈಲು , ಯುವ ಗೌಡ ಸಂಘದ ನಿರ್ದೇಶಕರಾದ ಹರಿಶ್ಚಂದ್ರ ಪಾತಿಕಲ್ಲು , ರಾಮಚಂದ್ರ ಪಳ್ಳತ್ತಡ್ಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.