Ad Widget

ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿದ ಒಂಭತ್ತು ಮಹಿಳಾ ಗೃಹರಕ್ಷಕಿಯರಿಗೆ ಸನ್ಮಾನ : ಮಹಿಳೆಯರು ದೈವಾಂಶ ಸಂಭೂತರು‌ – ಡಾ\\ ಚೂಂತಾರು

ಮಹಿಳೆ ಅತ್ಯಂತ ಸಹನಾಮಯಿ ಮತ್ತು ಮಾತೃ ಹೃದಯದವರು. ಪ್ರತಿಯೊಬ್ಬ ಮಹಿಳೆಯೂ ದೇವಿಯ ಸಮಾನರು. ಮಹಿಳೆ ತನ್ನ ಮನೆಕೆಲಸದ ಜೊತೆ ಜೊತೆ ಗೆ ಸಮಾಜದ ಜವಾಬ್ದಾರಿಯನ್ನು ನಿಭಾಯಿಸುವುದು ಸುಲಭದ ಕೆಲಸವಲ್ಲ. ಈ ಹಿನ್ನೆಲೆಯಲ್ಲಿ ಮನೆ ಮಕ್ಕಳು ಕುಟುಂಬವನ್ನು ನಿಭಾಯಿಸುತ್ತಾ ಸಾಮಾಜಿಕ ಬದ್ಧತೆ ಕಳಕಳಿ ಮತ್ತು ಕಾಳಜಿಯಿಂದ ಗೃಹರಕ್ಷಕಿಯಾಗಿ ಕೆಲಸ ಮಾಡುತ್ತಾ ಸಮಾಜ ಸೇವೆಯನ್ನು ಮಾಡುವುದು ಅತ್ಯಂತ ಪ್ರಶಂಸನೀಯ. ನವರಾತ್ರಿಯ ಶುಭ ಸಂದರ್ಭದಲ್ಲಿ ಒಂಭತ್ತು ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿದ ಒಂಭತ್ತು ಮಹಿಳಾ ಗೃಹರಕ್ಷಕಿಯರನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀಮೋಹನ್ ಚೂಂತಾರುರವರ ನೇತೃತ್ವದಲ್ಲಿ ಗೌರವಿಸಲಾಯಿತು. 
       ದಿನಾಂಕ: 04-10-2024ನೇ ಶುಕ್ರವಾರದಂದು ನಗರದ ಮೇರಿಹಿಲ್‍ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಛೇರಿಯಲ್ಲಿ ನವರಾತ್ರಿಯ ಶುಭ ಸಂದರ್ಭದಲ್ಲಿ 9 ವಿವಿಧ ಇಲಾಖೆಗಳಾದ ಸಾರಿಗೆ, ಎನ್‍ಸಿಸಿ, ವಿಧಿ ವಿಜ್ಞಾನ ಕಾರಾಗೃಹ, ಪೊಲೀಸ್ ಇಲಾಖೆ, ಅಗ್ನಿಶಾಮಕ, ದೇವಸ್ಥಾನ, ಕೆಎಸ್‍ಆರ್‍ಟಿಸಿ, ರೈಲ್ವೇ ಪೊಲೀಸ್ ಇಲಾಖೆ ಕೆಲಸ ಮಾಡಿದ  ಒಂಭತ್ತು ಮಹಿಳಾ ಗೃಹರಕ್ಷಕಿಯರಿಗೆ  ಸನ್ಮಾನ ಕಾರ್ಯಕ್ರಮ ಜರುಗಿತು. ಕಳೆದ ಐದು ವರ್ಷಗಳಿಂದ  ನವರಾತ್ರಿ ಸಂದರ್ಭದಲ್ಲಿ  ಒಂಭತ್ತು ಗೃಹರಕ್ಷಕಿಯರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದು,  ಈ ವರ್ಷವೂ ಕೂಡಾ ಲಯನ್ಸ್  ಕ್ಲಬ್ ಮಂಗಳೂರು ಇದರ ಉಪಾಧ್ಯಕ್ಷ ಲಯನ್ ರಾಜೇಶ್ ಕಾಮತ್, ಲಯನ್ಸ್ ಮಾಜಿ ಅಧ್ಯಕ್ಷರಾದ  ಲಯನ್ ಸತೀಶ್ ರೈ, ಲಯನ್ಸ್ ಖಜಾಂಚಿ  ಲಯನ್ ನಾರಾಯಣ ಕೋಟ್ಯಾನ್, ಲಯನ್ಸ್ ಮಾಜಿ ಉಪಾಧ್ಯಕ್ಷೆ  ನ್ಯಾನ್ಸಿ ಮಸ್ಕರೀನ್ಹಸ್  ಇವರು ಎಲ್ಲರಿಗೂ ಶಾಲು ಹೊದಿಸಿ, ಹಾರ ಹಾಕಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ದ.ಕ. ಜಿಲ್ಲಾ ಗೃಹರಕ್ಷಕ ದಳ  ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ಪಡೆ ಮತ್ತು ಲಯನ್ಸ್  ಕ್ಲಬ್ ಮಂಗಳೂರು ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಜರುಗಿತು.
         ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಲಯನ್ಸ್ ಕ್ಲಬ್ ಮಂಗಳೂರು ಇದರ ಮಾಜಿ ಅಧ್ಯಕ್ಷರಾದ  ಲಯನ್ ಸತೀಶ್ ರೈ, ಅವರು  ಮಾತನಾಡಿ ಸನ್ಮಾನದಿಂದ  ಗೌರವ ಸಿಗುವುದರ ಜೊತೆಗೆ  ಜವಾಬ್ದಾರಿ  ಹೆಚ್ಚಿದೆ. ಮತ್ತಷ್ಟು  ಹುರುಪು ಹಾಗೂ  ಹುಮ್ಮಸ್ಸಿನಿಂದ ಕೆಲಸ ಮಾಡಿ  ಸಮಾಜದ ಋಣ ತೀರಿಸಿ ಎಂದು  ಗೃಹರಕ್ಷಕಿಯರು ಹಾರೈಸಿದರು.  ಅಧ್ಯಕ್ಷೀಯ  ಭಾಷಣ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀಮೋಹನ ಚೂಂತಾರು ಅವರು ಮಾತನಾಡಿ ಮಹಿಳೆ ಗೃಹರಕ್ಷಕಿಯಾಗಿ ಕೆಲಸ ಮಾಡುವುದರ ಜೊತೆಗೆ ಮನೆ ಕೆಲಸ, ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುತ್ತಾಳೆ. ಆಕೆ ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ, ಹೆಂಡತಿಯಾಗಿ, ನಾದಿನಿಯಾಗಿ ಹತ್ತು ಹಲವು ರೂಪಗಳಲ್ಲಿ ಪುರುಷನಿಗೆ ಸರಿ ಸಮಾನವಾಗಿ ಕೆಲಸ ಮಾಡುತ್ತಾಳೆ. ಅವರ ಸೇವೆ ಅತ್ಯಂತ ಶ್ಲಾಘನೀಯ ಮತ್ತು ಅನುಕರಣೀಯ ಎಂದರು. ಎಲೆಮರೆಯ ಕಾಯಿಯಂತೆ ಕೆಲಸ ಮಾಡುವ ಗೃಹರಕ್ಷಕಿಯರನ್ನು ಗುರುತಿಸಿ ಗೌರವಿಸಿ ಮುನ್ನೆಲೆಗೆ ತರುವ  ಕೆಲಸ ಸಮಾಜ ಮಾಡಬೇಕು ಎಂದು ಕರೆ ನೀಡಿದರು.
         ಈ ಸಂದರ್ಭದಲ್ಲಿ ಒಂಭತ್ತು ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಒಂಭತ್ತು ಗೃಹರಕ್ಷಕಿಯರಾದ ಭಾರತಿ, ಮೆ.ನಂ. 71, ಮಲ್ಲಿಕಾ, ಮೆ.ನಂ. 92, ಕವಿತಾ,  ಮೆ.ನಂ. 67, ಸೇಸಮ್ಮ, ಮೆ.ನಂ. 809, ಶ್ರುತಿ, ಮೆ. ನಂ. 236, ಜಯಶ್ರೀ, ಮೆ. ನಂ. 234 ವಾಣಿಶ್ರೀ, ಮೆ. ನಂ. 219. ಖತೀಜಮ್ಮ, ಮೆ. ನಂ. 801 ಮತ್ತು ಚಿತ್ರಾಕ್ಷಿ, ಮೆ. ನಂ. 244 ಇವರುಗಳಿಗೆ ಸನ್ಮಾನ ಮಾಡಲಾಯಿತು.
      ಈ ಸಂದರ್ಭದಲ್ಲಿ ಮಂಗಳೂರು ಘಟಕದ ಸೀನಿಯರ್ ಪ್ಲಟೂನ್ ಕಮಾಂಡರ್  ಮಾರ್ಕ ಸೆರಾ   ಸ್ವಾಗತ ಭಾಷಣ ಮಾಡಿ ವಂದಿಸಿದರು. ಲಯನ್ಸ್  ಕ್ಲಬ್ ಮಂಗಳೂರು ಇದರ ಉಪಾಧ್ಯಕ್ಷ ಲಯನ್ ರಾಜೇಶ್ ಕಾಮತ್, ಲಯನ್ಸ್ ಮಾಜಿ ಅಧ್ಯಕ್ಷರಾದ  ಲಯನ್ ಸತೀಶ್ ರೈ, ಲಯನ್ಸ್ ಖಜಾಂಚಿ  ಲಯನ್ ನಾರಾಯಣ ಕೋಟ್ಯಾನ್, ಲಯನ್ಸ್ ಮಾಜಿ ಉಪಾಧ್ಯಕ್ಷೆ  ನ್ಯಾನ್ಸಿ ಮಸ್ಕರೀನ್ಹಸ್  ಹಾಗೂ  ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿಯ ಕಛೇರಿ ಅಧೀಕ್ಷರಾದ ಶ್ರೀ ಎನ್. ಚಂದ್ರ, ಕಚೇರಿ ಸಿಬ್ಬಂದಿ ಶ್ರೀಮತಿ ಮಂಜುಳಾ ಮತ್ತು ಕಛೇರಿಯ ಗೃಹರಕ್ಷಕಿಯರಾದ ಸುಲೋಚನಾ, ನಿಶಾ ಮುಂತಾದವರು ಉಪಸ್ಥಿತರಿದ್ದರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!