ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ದೊಡ್ಡಬಳ್ಳಾಪುರ ಶಾಸಕರರಾದ ಭಾಜಪಾ ರಾಜ್ಯ ಯುವಮೊರ್ಚಾ ಅಧ್ಯಕ್ಷರಾದ ಧೀರಜ್ ಮುನಿರಾಜು ಅವರು ಇಂದು ಭೇಟಿ ಮಾಡಿದರು. ಶಾಸಕಿ ಭಾಗೀರಥಿ ಮುರುಳ್ಯ ಅವರ ಸ್ವಾಗತಿಸಿದರು.
ಶಾಸಕರು ದೇವರ ದರ್ಶನ ಪಡೆದು ರಥಬೀದಿಯಲ್ಲಿ ಪಕ್ಷದ ಸದಸ್ಯತ್ವ ಅಭಿಯಾನ ನಡೆಸಿದರು. ಈ ಸಂದರ್ಭದಲ್ಲಿ ಸುಳ್ಯ ಮಂಡಲ ಸಮಿತಿಯ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಜಿಲ್ಲಾ ಯುವಮೊರ್ಚಾ ಅಧ್ಯಕ್ಷ ನಂದನ್ ಮಲ್ಯ ಹಾಗೂ ಇತರ ರಾಜ್ಯ ಯುವಮೊರ್ಚಾದ ಪಧಾದಿಕಾರಿಗಳು, ಸುಳ್ಯ ಮಂಡಲ ಪದಾಧಿಕಾರಿಗಳು, ಸುಬ್ರಮಣ್ಯದ ಪ್ರಮುಖ ನಾಯಕರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.