
ಐವರ್ನಾಡು ಶಕ್ತಿ ಕೇಂದ್ರದ ಕಾರ್ಯಕರ್ತ ಮೋಕ್ಷಿತ್ ಇವರು ಅಗ್ನಿವೀರ್ ಗೆ ಆಯ್ಕೆಯಾದ ಹಿನ್ನಲೆಯಲ್ಲಿ ಭಾಜಪಾ ಯುವಮೋರ್ಚಾ ಸುಳ್ಯ ಮಂಡಲದ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಯುವಮೋರ್ಚಾ ದ ಅಧ್ಯಕ್ಷರಾದ ಶ್ರೀಕಾಂತ್ ಮಾವಿನಕಟ್ಟೆ ,ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೊಲ್ಲರಮೂಲೆ ಮತ್ತು ಪದಾಧಿಕಾರಿಗಳು, ಸ್ಥಳೀಯರಾದ ನಂದಕುಮಾರ್ ಬಿ., ನವೀನ್ ಸಾರಕೆರೆ, ಅನಿಲ್ ದೇರಾಜೆ, ಅನಿಲ್ ಐವರ್ನಾಡು, ಗಣೇಶ್ ವಿ., ಮೋಹನ ಬಿ., ನಿಶ್ಚಿತ್ ಐವರ್ನಾಡು, ರೇಣುಕಾ ಚಾಕೋಟೆ, ಅವಿನ್ ಬಾಂಜಿಕೊಡಿ ಹಾಗೂ ಕಾರ್ಯಕರ್ತರು ಹಾಜರಿದ್ದರು.

