ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಬಾಯಿ, ಮುಖ ಮತ್ತು ದವಡೆಯ ಶಸ್ತç ಚಿಕಿತ್ಸಾ ವಿಭಾಗದ ವತಿಯಿಂದ ತುರ್ತು ಜೀವಾಧಾರ ತರಭೇತಿ ಕಾರ್ಯಗಾರವನ್ನು ಜೀವರಕ್ಷಾ ಟ್ರಸ್ಟ್ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಇವರುಗಳ ಸಹಯೋಗದೊಂದಿಗೆ ಸಪ್ಟೆಂಬರ್ ೨೫,೨೬,೨೭ರಂದುಆಯೋಜಿಸಲಾಗಿತ್ತು. ಕಾರ್ಯಗಾರವನ್ನು ಕೆ.ವಿ.ಜಿ ದಂತ ಮಹಾವಿದ್ಯಾಲಯದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮೌರ್ಯ ಆರ್ ಪ್ರಸಾದ್ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮೋಕ್ಷ ನಾಯಕ್, ಕೊಡಗು ವೈದ್ಯಕೀಯ ಕಾಲೇಜಿನ ಬಯೋಕೆಮಿಸ್ಟಿç ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ದಿವಿಜ, ಕೆ.ವಿ.ಜಿ ದಂತ ಮಹಾವಿದ್ಯಾಲಯದ ವಿಭಾಗ ಮುಖ್ಯಸ್ಥರು ಹಾಗೂ ಪಿಜಿ ಡೈರೆಕ್ಟರ್ ಡಾ. ಶರತ್ ಕುಮಾರ್ ಶಟ್ಟಿ ಮತ್ತು ಡಾ. ಪ್ರಸನ್ನ ಕುಮಾರ್ ವಿಭಾಗ ಮುಖ್ಯಸ್ಥರು, ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಡಾ. ಮನೋಜ್ ಕುಮಾರ್ ಅಡ್ಡಂತಡ್ಕ, ಕಾರ್ಯಗಾರದ ಮುಖ್ಯಸ್ಥೆ ಡಾ. ರಚನಾ ಪಿ.ಬಿ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕರಾಗಿ ಡಾ. ಮಹಾಬಲೇಶ್ವರ ಸಿ. ಹೆಚ್., ಕಾಲೇಜಿನ ಆಡಳಿತಾಧಿಕಾರಿ ಮಾಧವ ಬಿ.ಟಿ., ಡಾ. ದೇವಿ ಪ್ರಸಾದ್, ಡಾ. ಹೇಮಂತ್ ಬಟ್ಟೂರು, ಡಾ. ಅಲ್ವಿನ್ ಆಂಟೋನಿ, ಡಾ. ದಿಬಾಕರ್ ಸೂತ್ರಧಾರ್, ಡಾ. ಸಂದೀಪ್ ಬಿ.ಎಸ್. ಉಪಸ್ಥಿತರಿದ್ದರು. ೯೦ ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಭಾಗವಹಿಸಿದರು.ಡಾ. ನಾರಾಯಣ ಹೊಳ್ಳರವರು ತುರ್ತು ಜೀವಾಧಾರ ಕಾರ್ಯಕ್ರಮವೆಂದರೇನು, ಅದನ್ನು ಮಾಡುವ ಬಗೆ ಹೇಗೆ ಮತ್ತು ಮಹತ್ವದ ಕುರಿತು ಮಾಹಿತಿ ನೀಡಿದರು. ಯಾವುದೇ ಜಾಗದಲ್ಲಿ ಎಂಥಹುದೇ, ಪರಿಸ್ಥಿತಿಯಲ್ಲಿ ಒಬ್ಬ ಮನುಷ್ಯನ ಜೀವವನ್ನು ಉಳಿಸಲು ಬೇಕಾಗುವಂತಹ ಚಾಕಚಕ್ಯತೆ ಮತ್ತು ತಿಳುವಳಿಕೆಯನ್ನು ಕಿರುಚಿತ್ರಗಳ ಮೂಲಕ ನೀಡಿದರು. ಹಾಗೂ ಮನುಷ್ಯನ ಮಾದರಿಗಳ ಮೇಲೆ ಕೃತಕ ಉಸಿರಾಟ ಹಾಗೂ ಇತರ ತುರ್ತು ಜೀವಾಧಾರ ಕಾರ್ಯಕ್ರಮಗಳನ್ನು ಮಾಡಿತೋರಿಸಿದರು. ನಂತರದಲ್ಲಿ ಇವರುಗಳ ಮೇಲ್ವಿಚಾರಣೆಯಡಿಯಲ್ಲಿ ಆ ವಿಧಾನಗಳನ್ನು ಇಲ್ಲಿ ದಂತ ವೈದ್ಯ ವಿದ್ಯಾರ್ಥಿಗಳು ನಡೆಸಿದರು ಮತ್ತು ಇವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಸ್ವಾಗತವನ್ನು ಡಾ. ಪ್ರಸನ್ನ ಕುಮಾರ್ ನಡೆಸಿಕೊಟ್ಟರು. ಡಾ. ರಚನಾ ಪಿ.ಬಿ ವಂದಿಸಿದರು. ಡಾ. ಆಯುಷಿ ಮತ್ತು ಡಾ. ಗಾಯತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು.
- Tuesday
- November 26th, 2024